ಇತ್ತೀಚಿನ ಸುದ್ದಿ
ಹಿರಿಯ ರಾಜಕಾರಣಿ ಅಮರ್ ಸಿಂಗ್ ಇನ್ನಿಲ್ಲ
August 1, 2020, 11:41 AM

ನವದೆಹಲಿ (reporterkarnatakanews): ಹಿರಿಯ ರಾಜಕಾರಣಿ ಅಮರ್ ಸಿಂಗ್ ಇನ್ನಿಲ್ಲ. ಕಳೆದ ಕೆಲವು ತಿಂಗಳಿನಿಂದ ಅವರು ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದರು.
ಭಾರತದ ರಾಜಕಾರಣದಲ್ಲಿ ತಮ್ಮದೇ ಆದ ನಡೆ ನುಡಿಗಳಿಂದ ಅಮರ್ ಸಿಂಗ್ ಗುರುತಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ಆರ್ಥಿಕ ಸಂಕಷ್ಟ ಎದುರಿಸಿದ್ದಾಗ ಅವರ ನೆರವಿಗೆ ನಿಂತ ರಾಜಕಾರಣಿಗಳಲ್ಲಿ ಅಮರ್ ಸಿಂಗ್ ಕೂಡ ಒಬ್ಬರಾಗಿದ್ದರು