ಇತ್ತೀಚಿನ ಸುದ್ದಿ
ಸ್ವಚ್ಛ ಸುರತ್ಕಲ್ ಅಭಿಯಾನ ಹಂತ 2ರ ಸ್ವಯಂಸೇವಕರ ಸಭೆ ಅ. 27ರಂದು
October 26, 2020, 12:36 PM

ಸುರತ್ಕಲ್ (reporterkarnataka news):
ನಾಗರಿಕ ಸಲಹಾ ಸಮಿತಿ ಸುರತ್ಕಲ್, ರೋಟರಿ ಕ್ಲಬ್ ಸುರತ್ಕಲ್ ಹಾಗೂ ವಿರಾಟ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎಂ ಆರ್ ಪಿಎಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಸ್ವಚ್ಛ ಸುರತ್ಕಲ್ ಅಭಿಯಾನ ಹಂತ 2ರ ಸ್ವಯಂಸೇವಕರ ಸಭೆ ಅ. 27ರಂದು ಸಂಜೆ
5.30 ಕ್ಕೆ ಸರಿಯಾಗಿ ಸುರತ್ಕಲ್ ವಿರಾಟ್ ಆವರಣದಲ್ಲಿ ನಡೆಯಲಿದೆ.
ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ರಾಜ್ ಮೋಹನ್ ರಾವ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಯಂಗ್ ಇಂಡಿಯಾ ಹಾಗೂ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮುಲ್ಕಿ ಇದರ ಮುಖ್ಯಸ್ಥರೂ ಈಗಾಗಲೇ ಕರಾವಳಿ ಸಮುದ್ರ ಕಿನಾರೆಯ ಸ್ವಚ್ಛತೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಮಧುಕರ್ ಕುಡ್ವಾ ಹಾಗೂ ತಂಡದವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಚ್ಛ ಸುರತ್ಕಲ್ ಅಭಿಯಾನದ ಪರವಾಗಿ
ಸತೀಶ್ ಸದಾನಂದ್ ತಿಳಿಸಿದ್ದಾರೆ.