ಇತ್ತೀಚಿನ ಸುದ್ದಿ
ಸೋಮಣ್ಣ, ಕಾರಜೋಳ, ಬೊಮ್ಮಾಯಿಗೆ ಬಿಗ್ ರಿಲೀಫ್: ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್
August 3, 2020, 9:46 AM

ಬೆಂಗಳೂರು(reporterkarnataka news):
ಮುಖ್ಯಮಂತ್ರಿ ಯಡಿಯೂರಪ್ಪ ಜತೆಗಿನ ನಿರಂತರ ಪ್ರಾಥಮಿಕ ಸಂಪರ್ಕಕದ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಸೋಮಣ್ಣ ಮತ್ತು ಗೋವಿಂದ ಕಾರಜೋಳ ಕೊರೋನಾ ಪರೀಕ್ಷೆ ನಡೆಸಿದ್ದಾರೆ. ಎಲ್ಲರ ವರದಿ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಚಿವರು ಪಾಲ್ಗೊಂಡಿದ್ದರು.ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಯಾರೂ ಕೂಡ ಆತಂಕಪಡಬಾರದು ಎಂದು ಮನವಿ ಮಾಡಿದ್ದಾರೆ. ರಾಜ್ಯದ 6.5 ಕೋಟಿ ಜನರ ಆರೋಗ್ಯವೇ ನನಗೆ ಮುಖ್ಯ. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.