ಇತ್ತೀಚಿನ ಸುದ್ದಿ
ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಕಡೂರಿನ ಯಶಸ್ವಿನಿಗೆ 71ನೇ ಸ್ಥಾನ
August 4, 2020, 4:09 PM

ಬೆಂಗಳೂರು(reporterkarnataka news): ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ರಾಜ್ಯದ 37 ಪ್ರತಿಭಾವಂತರು 1000ದೊಳಗಿನ rank ನಲ್ಲಿ ಸ್ಥಾನ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬನೂರಿನ ಬಿ . ಯಶಸ್ವಿನಿ ಅಖಿಲ ಭಾರತ ಮಟ್ಟದಲ್ಲಿ 71ನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಮೊದಲಿಗರು ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.
ವಿನೋದ್ ಪಾಟೀಲ್ 132 ಮತ್ತು ಕೀರ್ತನಾ 167 ನೇ rank ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ.