3:40 AM Monday18 - January 2021
ಬ್ರೇಕಿಂಗ್ ನ್ಯೂಸ್
ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಇತ್ತೀಚಿನ ಸುದ್ದಿ

ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಮಿಂಚಿದ ಮಂಗಳೂರಿನ ಬಾಲನಟಿ ಆರಾಧನಾ

August 2, 2020, 4:33 PM

ಲತಾ ಎ. ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅತಿಯಾದ ಉತ್ಸಾಹ, ಹುಮ್ಮಸ್ಸು. ನಟನಾ ಕೌಶಲ್ಯ ಜತೆಗೆ ಮಾತಲ್ಲೇ ಮೋಡಿ ಮಾಡುವ ಕಲೆ, ಎಲ್ಲಕ್ಕಿಂತ ಮಿಗಿಲಾಗಿ ಬಾಲ್ಯದಲ್ಲೇ ಇನ್ನೊಬ್ಬರ ಕಣ್ಣೀರು ಒರೆಸುವ ತವಕ. ಇದು ಮಜಾ ಭಾರತ ಖ್ಯಾತಿಯ ಬಾಲನಟಿ ಆರಾಧನಾ ಭಟ್ ಸ್ಪೆಷಾಲಿಟಿ.

ಎರಡು ರಿಯಾಲಿಟಿ ಶೋ, ಒಂಭತ್ತು ಸಿನಿಮಾ, ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ನಿರೂಪಕಿ, ಆರದಿರಲಿ ಬದುಕು ಆರಾಧನಾ ತಂಡದ ಒಡತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಡಜನ್ ಗಟ್ಟಲೆ ಪುರಸ್ಕಾರ. ಇವೆಲ್ಲ ಈ ಪುಟ್ಟ ಮರಿ ತಾರೆಯ ಹಿರಿಮೆ ಮತ್ತು ಗರಿಮೆ.

ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಆರಾಧನಾ ನಿಡ್ಡೋಡಿಯ ಪದ್ಮಶ್ರೀ ಹಾಗೂ ಮೈಸೂರಿನ ರಾಜಗಿರಿ ದಂಪತಿಯ ಮುದ್ದಿನ ಮಗಳು. ಚಿಕ್ಕ ವಯಸ್ಸಿನಲ್ಲೇ ನಟನೆಯ ಸೆಳೆತ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ಮಜಾಭಾರತ ರಿಯಾಲಿಟಿ ಶೋಗೆ ಆಯ್ಕೆ. ಇದಾದ ನಂತರ ನಟನೆಯಲ್ಲಿ ಆರಾಧನಾ ಹಿಂತಿರುಗಿ ನೋಡಿಯೇ ಇಲ್ಲ. ಮಜಾ ಭಾರತದಲ್ಲಿ ಅದ್ಬುತ ನಟನೆಯ ಮೂಲಕ ಇಡೀ ರಾಜ್ಯದ ಜನತೆಯ ಹೃದಯದಲ್ಲಿ ಅಚ್ಚೊತ್ತಿದ್ದಾಳೆ.

ಆರಾಧನಾ ಭಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಡಾ. ಪ್ರಶಾಂತ್ ಮಾರ್ಲ ಅವರ ‘ಜೀವನ ವಿಲೀನ’ ಸಿನಿಮಾದಲ್ಲಿ ಅದ್ಭುತ ನಟನೆ ನೀಡಿದ್ದಾಳೆ. ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ನಂತರ ‘ಪುಟಾಣಿ ಪವರ್’ ಮಕ್ಕಳ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ‘ಕರ್ಣೆ’ ತುಳು ಸಿನಿಮಾದಲ್ಲಿಯೂ ನಟಿಸಿದ್ದಾಳೆ.

ಅರಗಿಣಿ ಖ್ಯಾತಿಯ ಈ ಬಾಲನಟಿ ನಟನೆ, ಗಾಯನ, ನೃತ್ಯ, ನಿರೂಪಣೆ ಜತೆಗೆ ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಅಸಹಾಯಕರಿಗೆ, ನಿರಾಶ್ರಿತರಿಗೆ ಹಾಗೂ ದುರ್ಬಲರಿಗೆ ತನ್ನ ಆರದಿರಲಿ ಬದುಕು ಆರಾಧನಾ ತಂಡದ ಮೂಲಕ ಆರ್ಥಿಕ ನೆರವು ನೀಡುತ್ತಿದ್ದಾಳೆ.

ಆರಾಧನಾಳಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿದೆ. ಕರ್ನಾಟಕ ಪ್ರತಿಭಾ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಮಾಜಿಕ ಕಳಕಳಿ ಪುರಸ್ಕಾರ, ಸಾಧನಾ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪುಟ್ಟ ಮುಡಿಯನ್ನೇರಿದೆ. ರಿಪೋರ್ಟರ್ ಕರ್ನಾಟಕ ವತಿಯಿಂದ ಆರಾಧನಾಳಿಗೆ ಅಲ್ ದಿ ಬೆಸ್ಟ್.

ಇತ್ತೀಚಿನ ಸುದ್ದಿ

ಜಾಹೀರಾತು