ಇತ್ತೀಚಿನ ಸುದ್ದಿ
ಸಿಎಂ ಯಡಿಯೂರಪ್ಪರಿಗೆ ಕೊರೊನಾ: ಉಡುಪಿ ಬಿಜೆಪಿ ಪಾಳಯದಲ್ಲಿ ಆತಂಕ
August 4, 2020, 3:08 AM

ಉಡುಪಿ(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಬಿಜೆಪಿಯಲ್ಲಿ ಆತಂಕ ಉಂಟಾಗಿದೆ. ಯಡಿಯೂರಪ್ಪ ಅವರಿಗೂ ಉಡುಪಿಗೂ ಏನು ನಂಟು ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಏನಾಗಿದೆ ಎಂಬುವುದಕ್ಕೆ ಮುಂದೆ ಓದಿ.
ಜುಲೈ 30ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಮೀನು ಕೃಷಿಕರ ದಿನಾಚರಣೆ ಅದಾಗಿತ್ತು. ಉಡುಪಿ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಮೀನುಗಾರಿಕೆ ಇಲಾಖೆ ಅಂಕಿಅಂಶ ಬಿಡುಗಡೆ ಹಾಗೂ ಮೀನುಗಾರಿಕೆ ವೇಳೆ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮೀನುಗಾರಿಕೆ ಫೆಡರೇಶನ್ ನ ಯಶಪಾಲ್ ಸುವರ್ಣ ಜತೆಗಿದ್ದರು.
ಕೃಷ್ಣಾದಲ್ಲಿ ಕಾರ್ಯಕ್ರಮ ನಡೆದ ನಾಲ್ಕೇ ದಿನದಲ್ಲಿ ಯಡಿಯೂರಪ್ಪ ಅವರಿಗೆ ಕೊರೊನಾ ದೃಢಪಟ್ಟಿತ್ತು. ಇದೀಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಉಡುಪಿ ಬಿಜೆಪಿ ನಾಯಕರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.