ಇತ್ತೀಚಿನ ಸುದ್ದಿ
ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ನಲ್ಲಿ ರಕ್ಷಿತಾಗೆ ಮೊದಲ ಸ್ಥಾನ
August 21, 2020, 7:40 AM

ಬೆಂಗಳೂರು(reporterkarnataka news): ಲಕ್ಷಾಂತರ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಆರ್ ವಿ ಕಾಲೇಜಿನ ರಕ್ಷಿತಾ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ಶುಭಾನ್ ದ್ವಿತೀಯ ಮತ್ತು ಶಶಾಂಕ್ ಬಾಲಾಜಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಬಿಎಸ್ಸಿ ಅಗ್ರಿಯಲ್ಲಿ ವರುಣಾ ಗೌಡ ಮೊದಲ ಸ್ಥಾನ, ಕೆ ಸಂಜನಾ ದ್ವಿತೀಯ ಸ್ಥಾನದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1, 75, 349 ವಿದ್ಯಾರ್ಥಿಗಳು 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಪೂರ್ಣಗೊಂಡ 21 ದಿನಗಳಲ್ಲಿ ಫಲಿತಾಂಶ ಹೊರಬಂದಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬೆಂಗಳೂರಿನಲ್ಲಿ ಫಲಿತಾಂಶ ಪ್ರಕಟಿಸಿದರು.
ಕೌನ್ಸೆಲಿಂಗ್ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ