ಇತ್ತೀಚಿನ ಸುದ್ದಿ
ಶ್ರೀನಗರ ಸಮೀಪ ನಡೆದ ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ
July 25, 2020, 7:38 AM

ನವದೆಹಲಿ(reporterkarntakanews): ಜಮ್ಮು ಕಾಶ್ಮೀರದ ಶ್ರೀನಗರದ ಬಳಿ ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಶ್ರೀನಗರ ಸಮೀಪದ ರಾನ್ ಭೀಘಡ್ ಪ್ರದೇಶದಲ್ಲಿ ಉಗ್ರರು ಆಶ್ರಯಪಡೆದಿದ್ದರು. ಶರಣಾಗತರಾಗುವಂತೆ ಮೊದಲು ಮನವಿ ಮಾಡಲಾಗಿತ್ತು. ಭಯೋತ್ಪಾದಕರು ಸ್ಪಂದಿಸದಿದ್ದಾಗ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು ಅವರ ಗುರುತು ಇದುವರೆಗೆ ಪತ್ತೆಯಾಗಿಲ್ಲ