10:35 AM Friday4 - December 2020
ಬ್ರೇಕಿಂಗ್ ನ್ಯೂಸ್
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ… ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ

ಇತ್ತೀಚಿನ ಸುದ್ದಿ

ಶ್ರಾವಣ ಶುಕ್ರವಾರ: ಕಡಲನಗರಿಯಲ್ಲಿ ಖರೀದಿ ತುಸು ಚೇತರಿಕೆ

July 24, 2020, 10:04 AM

ಮಂಗಳೂರು(reporterkarnataka news): ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಮಂಗಳೂರು ನಗರ ಸ್ವಲ್ಪ ಮಟ್ಟಿಗೆ ಶುಕ್ರವಾರ ಚೇತರಿಸಿಕೊಂಡಿದೆ. ಶ್ರಾವಣ ಶುಕ್ರವಾರ ಹಾಗೂ ನಾಗರ ಪಂಚಮಿ ಹಿನ್ನೆಯಲ್ಲಿ ಶುಕ್ರವಾರ ಖರೀದಿ ಸ್ವಲ್ಪ ಮಟ್ಟಿಗೆ ಜೋರಾಗಿಯೇ ನಡೆಯಿತು.

ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂ ಹೇರಲಾಗಿತ್ತು. ನಂತರ ಸುಮಾರು 40 ದಿವಸಗಳ ಕಾಲ ದೇಶದಲ್ಲಿ ಲಾಕ್ ಡೌನ್ ಹೇರಲಾಗಿತ್ತು. ನಂತರ ಲಾಕ್ ಡೌನ್ ತೆರೆದರೂ ಮಂಗಳೂರು ನಗರ ವ್ಯಾವಹಾರಿಕವಾಗಿ ಚೇತರಿಸಿಕೊಂಡಿಲ್ಲ. ಇದಾದ ಬಳಿಕ ಕಳೆದ ವಾರ ಮತ್ತೆ 7 ದಿನಗಳ ಲಾಕ್ ಡೌನ್ ಹಾಕಲಾಯಿತು. ಗುರುವಾರದಿಂದ ಲಾಕ್ ಡೌನ್ ತೆರೆಯಲ್ಪಟ್ಟರೂ ಮತ್ತೆ ಇಡೀ ನಗರ ಡಲ್ ಹೊಡೆಯುತ್ತಿತ್ತು. ಬೆರಳೆಣಿಯಷ್ಟು ಮಾತ್ರ ಸಿಟಿ ಬಸ್ ಹಾಗೂ ಸರ್ವಿಸ್ ಬಸ್ ಗಳು ಸಂಚಾರ ನಡೆಸುತ್ತಿವೆ. ಕೆಎಸ್ಸಾರ್ಟಿಸಿ ಕೂಡ ಬೇಡಿಕೆಗೆ ತಕ್ಕಂತೆ ಸಂಚಾರ ನಡೆಸುತ್ತಿವೆ. ಇವೆಲ್ಲದರ ಮಧ್ಯೆ ಶುಕ್ರವಾರ ಸ್ವಲ್ಪ ಮಟ್ಟಿಗೆ ನಗರ ಚೇತರಿಸಿಕೊಂಡಿದೆ. ನಗರದ ಆಯಕಟ್ಟಿನ ಪ್ರದೇಶದಲ್ಲಿ ಜನ ಹಾಗೂ ವಾಹನ ಸಂಚಾರ ಹೆಚ್ಚಾಗಿತ್ತು.

ನಗರದ ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್, ಸೆಂಟ್ರಲ್ ಮಾರ್ಕೆಟ್,  ಉರ್ವ ಮಾರ್ಕೆಟ್ ಪ್ರದೇಶ ತಕ್ಕ ಮಟ್ಟಿಗೆ ಜನಸಂದಣಿಗೆಯಿಂದ ಕೂಡಿತ್ತು. ಸೆಂಟ್ರಲ್ ಮಾರ್ಕೆಟ್ ಸಮೀಪದ ಕಲ್ಪನಾ ಸ್ವೀಟ್ಸ್, ಕೋಮಲ್ಸ್ ಸೇರಿದಂತೆ ಸ್ವೀಟ್ ಸ್ಟಾಲ್ ಗಳಲ್ಲಿ ಗ್ರಾಹಕರ ಸಂಖ್ಯೆ ಜೋರಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು