ಇತ್ತೀಚಿನ ಸುದ್ದಿ
ವರ್ಷದೊಳಗೆ ಸಿಎಂ ಮಾಡಿ: ಪ್ರಿಯಾಂಕಗೆ ಪೈಲಟ್ ಎಚ್ಚರಿಕೆ
July 18, 2020, 10:54 AM

ಹೊಸದಿಲ್ಲಿ(reporterkarnataka news): ಕಾಂಗ್ರೆಸ್ ಬಿಡಲೂ ಒಲ್ಲದ, ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿಯಲು ಒಪ್ಪದ ಸಚಿನ್ ಪೈಲಟ್ ಅವರು ತನ್ನನ್ನು ಒಂದು ವರ್ಷದೊಳಗೆ ಮುಖ್ಯಮಂತ್ರಿ ಮಾಡುವಂತೆ ತಾಕೀತು ಮಾಡಿದ್ದಾರೆ.
ಯಾವುದೇ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ಸಚಿನ್ ಪೈಲಟ್ ಅವರು ಶನಿವಾರ
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಜತೆ ನಡೆಸಿದ ದೀರ್ಘ ದೂರವಾಣಿ ಮಾತುಕತೆಯಲ್ಲಿ ಈ ಬೇಡಿಕೆ ಇಟ್ಟಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ವಿರುದ್ಧ ಬಂಡಾಯ ಎದ್ದಿರುವ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ. ಅವರ ಬೆಂಬಲಿಗ ಇಬ್ಬರು ಸಚಿವರನ್ನು ಕೂಡ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಒಟ್ಟು 18 ಮಂದಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಂಡುಕೋರರು ಹೈಕೋರ್ಟ್ ಮೆಟ್ಟಿಲೇರಿ ತಡೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ ಸಚಿನ್ ಪೈಲಟ್ ಅವರು ಬಿಜೆಪಿ ಸೇರುವುದಿಲ್ಲ. ಬದಲಿಗೆ ತೃತೀಯ ರಂಗ ಕಟ್ಟುವುದಾಗಿ ಬೆದರಿಕೆ ಹಾಕಿದ್ದಾರೆ.