ಇತ್ತೀಚಿನ ಸುದ್ದಿ
ಲೆಬನಾನ್ ನಲ್ಲಿ ಭಾರಿ ಸ್ಫೋಟದಲ್ಲಿ ಸತ್ತವರ ಸಂಖ್ಯೆ 73ಕ್ಕೆ ಏರಿಕೆ
August 5, 2020, 4:16 AM

ಬೇರೂತ್(reporterkarnataka news): ಲೆಬನಾನ್ ನ ಬೇರೂತ್ ನಲ್ಲಿ ದಾಸ್ತಾನು ಇರಿಸಲಾಗಿದ್ದ ಸ್ಫೋಟಕಕ್ಕೆ ಬೆಂಕಿ ತಗುಲಿದ ಕಾರಣ ಸಂಭವಿಸಿದ ಸ್ಫೋಟದಲ್ಲಿ ಇದುವರೆಗೆ 73 ಮಂದಿ ಬಲಿಯಾಗಿದ್ದಾರೆ.
3700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಅಮೋನಿಯಂ ನೈಟ್ರೇಟ್ ನ್ನು ದಾಸ್ತಾನು ಇರಿಸಲಾಗಿತ್ತು ಎಂದು ವರದಿಯಾಗಿದೆ.
ರಾಜಧಾನಿ ಲೆಬನಾನ್ ನಗರದಲ್ಲಿ ಭೀತಿ ಮೂಡಿಸಿದ ಸ್ಫೋಟದಿಂದಾಗಿ ದಟ್ಟ ಹೊಗೆ ಆವರಿಸಿತ್ತು. ಜನರು ಭಯ ಭೀತರಾಗಿದ್ದರು. ಸ್ಫೋಟದಲ್ಲಿ ಗಾಯಗೊಂಡಿರುವವರ ಹಲವರ ಸ್ಥಿತಿ ಚಿಂತಾಜನಕವಾಗಿದೆ.