ಇತ್ತೀಚಿನ ಸುದ್ದಿ
ಲಾಕ್ ಡೌನ್ : ಸಂಜೆ 5 ಗಂಟೆಗೆ ಸಿಎಂ ಯಡಿಯೂರಪ್ಪ ಮಹತ್ವದ ಪತ್ರಿಕಾಗೋಷ್ಠಿ
July 21, 2020, 10:29 AM

ಬೆಂಗಳೂರು(reporterkarnataka news):
ರಾಜಧಾನಿ ಬೆಂಗಳೂರಿನಲ್ಲಿ ಘೋಷಿಸಲಾಗಿರುವ ಲಾಕ್ ಡೌನ್ ಇಂದು ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಜೆ ಮಹತ್ವದ ಪತ್ರಿಕಾಗೋಷ್ಠಿ ನ಼ಡೆಸಲಿದ್ದಾರೆ.
ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜಾರಿಯಲ್ಲಿ ಇರಲಿರುವ ನಿರ್ಬಂಧ ಕುರಿತು ಅವರು ಮಾಹಿತಿ ನೀಡಲಿದ್ದಾರೆ.
ಬೆಂಗಳೂರಿನಲ್ಲಿ ಲಾಕ್ ಡೌನ್ ವಿಸ್ತರಣೆಯನ್ನು jಮುಖ್ಯಮಂತ್ರಿ ಈಗಾಗಲೇ ತಳ್ಳಿಹಾಕಿದ್ದಾರೆ. ಆದರೆ ಅದರ ಬದಲಿಗೆ ಕೆಲವು ಕಠಿಣ ನಿರ್ಬಂಧ ವಿಧಿಸಿ ರೋಗ ಹರ಼ಡದಂತೆ ತಡೆಯುವ ಯೋಜನೆ ಪ್ರಕಟಿಸಲಿದ್ದಾರೆ.
ರಾಜ್ಯದ ಖಜಾನೆ ತುಂಬಿಸುವಲ್ಲಿ ಬೆಂಗಳೂರು ಮಹತ್ವದ ಪಾತ್ರ ವಹಿಸುತ್ತದೆ. ಶೇಕ಼ಡ 83 ಆದಾಯ ತೆರಿಗೆ ರೂಪದಲ್ಲಿ ಬೆಂಗಳೂರಿನಿಂದ ಸಂಗ್ರಹವಾಗುತ್ತಿದೆ. ರಾಜ್ಯದ ಎರಡು ಮತ್ತು ಮೂರನೆ ಹಂತದ ನಗರಗಳ ಕೊಡುಗೆ ಗಮನಾರ್ಹವಾಗಿಲ್ಲ. ಇದು ಸರ್ಕಾರದ ಚಿಂತೆಗೆ ಕಾರಣವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಸ್ಥೆಗಳೇ ಆದಾಯದ ಮೂಲಗಳು.
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರ. ಇಲ್ಲಿನ ಸಣ್ಣ ಘಟನೆ ಸಹಜವಾಗಿಯೇ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತದೆ. ಅಂತಿಮವಾಗಿ ಬ್ರಾಂಡ್ ಬೆಂಗಳೂರಿನ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಸರ್ಕಾರದ ಮುಂದಿರುವ ಸವಾಲಾಗಿದೆ