6:08 AM Sunday24 - January 2021
ಬ್ರೇಕಿಂಗ್ ನ್ಯೂಸ್
ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ… ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ, ಸಿಸಿಬಿ ಪೊಲೀಸರಿಂದ 6 ಮಂದಿಯ ಬಂಧನ ಪ್ರತಿಭಟನೆ ನಿರತ ರೈತರಿಗೆ ಟ್ರ್ಯಾಕ್ಟರ್ Rally ನಡೆಸಲು ದಿಲ್ಲಿ ಪೊಲೀಸರು ಕೊನೆಗೂ ಅನುಮತಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು…

ಇತ್ತೀಚಿನ ಸುದ್ದಿ

ಲಾಕ್ ಡೌನ್ ನಲ್ಲಿ ಜಾಲಿ ರೈಡ್ : ಮಂಗಳೂರಿನಲ್ಲಿ ಮಧ್ಯಾಹ್ನದ ವರೆಗೆ ವಾಹನಗಳ ಅರ್ಭಟ

July 18, 2020, 7:45 AM

ಮಂಗಳೂರು(reporterkarnataka news)

ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ವಿಧಿಸಿರುವ ಎರಡನೇ ಹಂತದ ಲಾಕ್ ಡೌನ್ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಲಾಕ್ ಡೌನ್ ಸಡಿಲಿಕೆ ಸಮಯದಲ್ಲಿ ವಿಪರೀತ ವಾಹನ ಸಂಚಾರವನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತು.

ಲಾಕ್ ಡೌನ್ ಸಡಿಲಿಕೆಯ ವೇಳೆ ವಿವಿಧ ಕಾರಣಗಳನ್ನು ನೀಡಿ ನಗರ ಪ್ರವೇಶಿಸುವವರ ಸಂಖ್ಯೆ ಶನಿವಾರ ವಿಪರೀತವಾಗಿತ್ತು. ದ್ವಿಚಕ್ರ ವಾಹನ ಹಾಗೂ ಕಾರುಗಳ ಓಡಾಟ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಒಬ್ಬಿಬ್ಬರ ಪ್ರಯಾಣಕ್ಕೂ ದೊಡ್ಡ ಐಷಾರಾಮಿ ಕಾರುಗಳನ್ನು ಬಳಸುವುದು ಕಂಡು ಬಂತು.

ಲಾಕ್ ಡೌನ್ ಸಡಿಲಿಕೆ ವೇಳೆ ವಾಹನಗಳನ್ನು ನಿಯಂತ್ರಿಸಲು ಕೊಟ್ಟಾರ ಚೌಕಿ, ಕುಂಟಿಕಾನ, ಲಾಲ್ ಬಾಗ್, ಹಂಪನಕಟ್ಟೆ, ಆರ್ ಟಿಒ ಬಳಿ ಪೊಲೀಸರ ತಂಡ ಕಾರ್ಯಪ್ರವೃತ್ತವಾಗಿತ್ತು. ವಾಹನಗಳ ಸವಾರರು ಕೆಲವು ಕಡೆಗಳಲ್ಲಿ ಪೊಲೀಸರ ಜತೆ ವಾಗ್ವಾದ ಮಾಡುವುದು ಕಂಡು ಬಂತು.

ಇತ್ತೀಚಿನ ಸುದ್ದಿ

ಜಾಹೀರಾತು