ಇತ್ತೀಚಿನ ಸುದ್ದಿ
ರಾಜ್ಯ ಅರಣ್ಯ ಸಚಿವ ಆನಂದ್ ಸಿಂಗ್ ಗೆ ಕೊರೋನಾ ಸೋಂಕು
July 26, 2020, 5:10 AM
ಬೆಂಗಳೂರು(reporterkarnataka news):
ಅರಣ್ಯ ಸಚಿವ ಆನಂದ್ ಸಿಂಗ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿಂದೆ ಅವರ ಕಾರು ಚಾಲಕನಿಗೂ ಕೂಡ ಕೊರೋನಾ ಸೋಂಕು ದೃಢೀಕರಿಸಲಾಗಿತ್ತು.
ಆನಂದ್ ಸಿಂಗ್ ಸದ್ಯ ತಮ್ಮಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಆನಂದ್ ಸಿಂಗ್ ಅವರು ಇತ್ತೀಚೆಗೆ ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.