ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಕೊರೋನಾಕ್ಕೆ ಒಂದೇ ದಿನ 72 ಮಂದಿ ಬಲಿ: 3648 ಮಂದಿಗೆ ಸೋಂಕು
July 20, 2020, 3:45 PM

ಬೆಂಗಳೂರು(reporterkarnatakanews):
ಮಾರಕ ಕೊರೋನಾ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 72 ಮಂದಿಯನ್ನು ಬಲಿಪಡೆದುಕೊಂಡಿದೆ. ಇದೇ ವೇಳೆ ಹೊಸದಾಗಿ 3648 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾದಿಂದ ಒಂದೇ ದಿನ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1403ಕ್ಕೆ ಏರಿದೆ. ಬೆಂಗಳೂರಿನಲ್ಲಿ 1452 ಮಂದಿಗೆ ಹೊಸದಾಗಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ರಾಜ್ಯದಲ್ಲಿ 730 ಮಂದಿ ಕೊರೋನಾದಿಂದ ಇಂದು ಗುಣಮುಖರಾಗಿದ್ದಾರೆ.