ಇತ್ತೀಚಿನ ಸುದ್ದಿ
ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಗೆ ಹೈಕೋರ್ಟ್ ರಿಲೀಫ್
July 24, 2020, 6:47 AM

ನವದೆಹಲಿ(reporterkarnatakanews):
ರಾಜಸ್ತಾನ ಕಾಂಗ್ರೆಸ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಸ್ಪೀಕರ್ ಅವರಿಗೆ ಆದೇಶ ನೀಡಿದೆ.
ಈ ಸಂಬಂಧ ತೀರ್ಪು ನೀಡುವುದನ್ನು ರಾಜಸ್ತಾನ ಹೈಕೋರ್ಟ್ ಮುಂದೂಡಿದೆ. ಸ್ಪೀಕರ್ ಅವರು ಅನರ್ಹತೆ ಪ್ರಕ್ರಿಯೆ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ರಾಜಸ್ತಾನ ಹೈಕೋರ್ಟ್ ಸೂಚಿಸಿದೆ.
ರಾಜಸ್ತಾನ ಹೈಕೋರ್ಟ್ ಆದೇಶವನ್ನು ಸ್ಪೀಕರ್ ಅವರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ.
ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ರಾಜಸ್ತಾನದ ಬಿಕ್ಕಟ್ಟಿನ ವಿಚಾರಣೆ ನಡೆಯಲಿದೆ. ಇದೀಗ ಎಲ್ಲರ ದೃಷ್ಟಿ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ.
ಈ ಮಧ್ಯೆ ರಾಜಸ್ತಾನ ಹೈಕೋರ್ಟ್, ಪ್ರಕರಣದಲ್ಲಿ . ಕೇಂದ್ರ ಸರ್ಕಾರವನ್ನು ಕೂಡ ಕಕ್ಷಿದಾರನನ್ನಾಗಿ ಸೇರಿಸಿದೆ. ಜುಲೈ 14ರಂದು ಸ್ಪೀಕರ್ ಸಿ ಪಿ ಜೋಷಿ ಅವರು ಸಚಿನ್ ಪೈಲಟ್ ಮತ್ತು ಅವರ 18 ಬೆಂಬಲಿಗ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದರು.