ಇತ್ತೀಚಿನ ಸುದ್ದಿ
ಮಾಜಿ ಸಿಎಂ ಸಿದ್ಧು ಪುತ್ರನಿಗೂ ಕೊರೊನಾ ಪಾಸಿಟಿವ್
August 7, 2020, 1:33 PM

ಬೆಂಗಳೂರು ( ರಿಪೋರ್ಟರ್ ಕರ್ನಾಟಕ)
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಆಗಸ್ಟ್ 4ರಂದು ಕೋವಿಡ್ ದೃಢವಾಗಿತ್ತು.
ಈಗ ಅವರ ಪುತ್ರ, ವೈದ್ಯರಾಗಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೂ ಕೋವಿಡ್ ಇರುವುದು ದೃಢವಾಗಿದೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ