10:48 AM Friday4 - December 2020
ಬ್ರೇಕಿಂಗ್ ನ್ಯೂಸ್
ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ… ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ

ಇತ್ತೀಚಿನ ಸುದ್ದಿ

ಮುಷರ್ರಫ್ ಷಡ್ಯಂತ್ರದ ಹುಟ್ಟಡಗಿಸಿದ ಭಾರತ ಸೇನೆಯ ಸಾಧನೆಗೆ ಇಪ್ಪತ್ತೊಂದು ವರ್ಷ

July 26, 2020, 4:45 AM

info.reporterkarnataka@gmail.com

ಭಾರತದ ವಾಯುಸೇನೆ ಹಾಗೂ ಭೂಸೇನೆಯ ರೋಮಾಂಚನಗೊಳಿಸುವ ಶೌರ್ಯದಿಂದ ದೇಶ ಪಾಕಿಸ್ತಾನದ ಷಡ್ಯಂತ್ರಕ್ಕೆ ದಿಟ್ಟ ಉತ್ತರ ನೀಡಿ ನೆತ್ತರ ಓಕುಳಿ ಹರಿಸಿ ಕಾರ್ಗಿಲ್ ನೆಲವನ್ನು ತನ್ನದಾಗಿಸಿಕೊಂಡು ಇಂದಿಗೆ ಇಪ್ಪತ್ತೊಂದನೇ ವರುಷದ ಹರ್ಷ..! ಇದೇ ಕಾರ್ಗಿಲ್ ವಿಜಯ ದಿವಸ.

ಇಲಿಗಳಂತೆ ಭಾರತಕ್ಕೆ ನುಸುಳುವ ತಂತ್ರ ರೂಪಿಸಿಕೊಂಡಿದ್ದ ಉಗ್ರಗಾಮಿಗಳು ಹಾಗೂ ಪಾಕಿಸ್ತಾನದ ಸೈನಿಕರು ಕಾರ್ಗಿಲ್‌ ಜಿಲ್ಲೆಯಲ್ಲಿ ಲೈನ್‌ ಆಫ್‌ ಕಂಟ್ರೋಲ್‌(ಎಲ್‌ಒಸಿ) ಮೂಲಕ ಒಳ ನುಸುಳಿದ್ದು ಗೊತ್ತಾದ ತಕ್ಷ ಣ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರ ಗೊಳಿಸಿತು. 1999ರ ಮೇ ತಿಂಗಳಲ್ಲಿ ಆಪರೇಷನ್‌ ವಿಜಯ್‌ ಆರಂಭವಾಯಿತು.

ಮುಷರ್ರಫ್‌ ಷಡ್ಯಂತ್ರ :

ಕಾಶ್ಮೀರದಲ್ಲಿ ಒಳನುಗ್ಗುವ ಯೋಜನೆಯನ್ನು ತುಂಬ ನಾಜೂಕಾಗಿ ಮುಷರ್ರಫ್‌ ಯೋಜಿಸಿದ್ದರು. ವಿಶೇಷ ಎಂದರೆ ಅಂದಿನ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲವಂತೆ. ಅಂದಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್‌ ಮುಷರ್ರಫ್‌ ಕಾರ್ಗಿಲ್‌ ಯುದ್ಧದ ‘ಮಾಸ್ಟರ್‌ ಮೈಂಡ್‌’ ಎಂದು ನಂತರ ಗೊತ್ತಾಯಿತು. . ಈ ಕಾರ್ಯದಲ್ಲಿ ಮುಷರ್ರಫ್‌ಗೆ ನೆರವಾಗಿದ್ದು ಲೆಫ್ಟಿನೆಂಟ್‌ ಜನರಲ್‌ ಮೊಹಮ್ಮದ್‌ ಆಜಿಜ್‌.

ವಾಯುಸೇನೆಯ ಶೌರ್ಯ :

ಕಾರ್ಗಿಲ್‌ ಯುದ್ಧಕ್ಕೆ ವಾಯುಪಡೆಯನ್ನು ಬಳಸಿಕೊಳ್ಳಬೇಕೆಂದು 1999 ಮೇ 24ರಂದು ನಿರ್ಧರಿಸಲಾಯಿತು. ಆದರೆ, ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆ ದಾಟದಿರಲು ತೀರ್ಮಾನಿಸಲಾಯಿತು. ತನ್ನ ಗಡಿಯೊಳಗೇ ಅವಿತಿದ್ದ ಶತ್ರು ಸೈನಿಕರ ಮೇಲೆ ವಾಯುಪಡೆಯು ಬಾಂಬ್‌ ದಾಳಿ ನಡೆಸಲಾರಂಭಿಸಿತು. ಯುದ್ಧದ ವೇಳೆ ಡ್ರಾಸ್‌-ಕಾರ್ಗಿಲ್‌ ಪ್ರದೇಶದ ಟೈಗರ್‌ ಹಿಲ್‌ ಯುದ್ಧ ಭೂಮಿಯ ಪ್ರಮುಖ ಸ್ಥಳವಾಗಿತ್ತು.

60 ದಿನಗಳ ಸತತ ಯುದ್ಧ ಹಾಗೂ ಸೈನ್ಯದ ಶೌರ್ಯದ ಜತೆಗೆ ಎಚ್ಚರದ ನಡಿಗೆ ಭಾರತೀಯ ಸೇನೆ ಅಂತಿಮವಾಗಿ ಟೈಗರ್‌ ಹಿಲ್‌ ಅನ್ನು ಮರು ಸ್ವಾಧಿಧೀನಕ್ಕೆ ಪಡೆದು, ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಲು ಕಾರಣವಾಯಿತು.

ಭಾರತದ ಪರವಾಗಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಕ್ಯಾಪ್ಟನ್‌ ಮನೋಜ್‌ ಕುಮಾರ್‌ ಪಾಂಡೆ ಮತ್ತು ಕ್ಯಾಪ್ಟನ್‌ ವಿಕ್ರಮ್‌ ಭಾತ್ರಾ, ಸಂಜಯ್‌ ಕುಮಾರ್‌, ನಯಿಬ್‌ ಸುಬೇದಾರ್‌ ಯೋಗೇಂದ್ರ ಸಿಂಗ್‌ ಯಾದವ್‌ ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪುರಸ್ಕಾರ ನೀಡಿತು.

ಇತ್ತೀಚಿನ ಸುದ್ದಿ

ಜಾಹೀರಾತು