ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಯಡಿಯೂರಪ್ಪಗೆ ಮನೆಯಿಂದ ದೋಸೆ, ಉಪ್ಪಿಟ್ಟು:ಸ್ವಲ್ಪವೇ ಸವಿದ ಸಿಎಂ
August 3, 2020, 5:00 AM

ಬೆಂಗಳೂರು(reporterkarnataka news): ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನೆಯಿಂದ ದೋಸೆ, ಉಪ್ಪಿಟ್ಟು ಕಳುಹಿಸಿಕೊಡಲಾಗಿದೆ. ಬೆಳಗ್ಗೆ ಯಡಿಯೂರಪ್ಪ ಅವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ತಿಂಡಿ ಸೇವಿಸುತ್ತಾರೆ.
ಮನೆಯ ತಿಂಡಿಯನ್ನೇ ಮುಖ್ಯಮಂತ್ರಿ ಇಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದಪಡಿಸಲಾದ ತಿಂಡಿಯನ್ನು ಕಳುಹಿಸಿಕೊಡಲಾಗಿದೆ. ಯಡಿಯೂರಪ್ಪ ಅವರು ಆರೋಗ್ಯವಂತರಾಗಿದ್ದಾರೆ ಎಂದು ಅವರ ಪುತ್ರ ವಿಜಯೇಂದ್ರ ಸಾಮಾಜಿಕ ಜಾಣ ತಾಣದ ಮೂಲಕ ತಿಳಿಸಿದ್ದಾರೆ.