ಇತ್ತೀಚಿನ ಸುದ್ದಿ
ಮುಂಬಾಯಿಯಲ್ಲಿ ದಿನವೊಂದರಲ್ಲೇ 58 ಬಲಿ ಪಡೆದ ಕೊರೊನಾ..!
July 23, 2020, 3:57 AM

ಮುಂಬೈ(reporterkarnataka news): ಮಾರಕ ಕೊರೋನಾ ಮುಂಬೈ ಮಹಾನಗರದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾ ಮುಂಬೈ ಮಹಾನಗರದಲ್ಲಿ 58 ಮಂದಿಯ ಬಲಿಪಡೆದುಕೊಂಡಿದೆ.
ಕೊರೋನಾದಿಂದ ಮುಂಬೈಯಲ್ಲಿ 5875 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರದಲ್ಲಿ ಒಂದೇ ದಿನ 280 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾದಿಂದಾಗಿ 12, 556 ಮಂದಿ ಮೃತಪಟ್ಟಿದ್ದಾರೆ.