10:35 AM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ಮಿಸಾಯಿಲ್ ಮೆನ್ ಪಯಾಣ ನಿಲ್ಲಿಸಿ ಐದು ವರ್ಷ ಕಳೆಯಿತು. ಅವರ ಸಾಧನೆಯ ಹಾದಿ ಅಚ್ಚಳಿಯದೆ ಉಳಿಯಿತು.!

July 27, 2020, 6:00 AM


ಜಿ.ಎನ್.ಎ
info.reporterkarnataka@gmail.com

ಅದು ನನ್ನ ಎರಡನೇ ಪಿಯುಸಿ ತರಗತಿಯ ಆರಂಭದ ದಿನಗಳು. ಮೊದಲೇ ಬೇಸಿಗೆ ರಜಾಮುಗಿಸಿ ಕಾಲೇಜಿನಲ್ಲಿ ಮತ್ತೆ ಪಾಠ ಪ್ರವಚನ ಕೇಳಲು ಒಲ್ಲದ ಮನಸ್ಸಿಂದ ಹೆಜ್ಜೆ ಬೆಳೆಸಿದ್ದೆ ಅನ್ಸುತ್ತೆ.
ಅವತ್ತು 2015 ರ ಜುಲೈ 27 ಕ್ಲಾಸ್ ಮುಗಿಸಿ ಮನೆಗೆ ಬಂದಾಗ ಸಂಜೆ ವಾರ್ತೆ ಕೇಳುವಾಗ ಒಮ್ಮೆಗೆ ಸ್ತಬ್ಧನಾಗಿ ಬಿಟ್ಟೆ. ಅವತ್ತು ಒಬ್ಬರ ನಿಧನದ ವಾರ್ತೆ ಕಿವಿಗೆ ಬಡಿಯಿತು ನೋಡುವಾಗ ಅವರು ಕುಸಿಯುವ ದೃಶ್ಯ ಮತ್ತೂ ಅಗಾಧ ನೋವು ನೀಡಿತ್ತು.  ನಾನು ಮಾತಾಡುತ್ತಿರುವುದು ಭಾರತ ಮಾತ್ರವಲ್ಲ ಗಡಿಯಾಚೆ ದಾಟಿ ಇಡೀ ವಿಶ್ವವೇ ಇಷ್ಟ ಪಟ್ಟಿದ ಎಪಿಜೆ ಅಬ್ದುಲ್ ಕಲಾಂ ಅವರ ಬಗ್ಗೆ.
ಸರಳ ಸಜ್ಜನಿಕೆ ವಿಜ್ಞಾನಿ ಸಾಧನೆಯ ಹಾದಿಯಲ್ಲಿ ಸಾಗುವವರಿಗೆ ನಿಜವಾದ ಸ್ಪೂರ್ತಿಯ ಸೆಲೆಯಾಗಿದ್ದ ಕಲಾಂ ಅವರು ಶಿಲ್ಲಾಂಗ್‌ನ ಐಐಎಂನಲ್ಲಿ “ಲಿವೇಬಲ್ ಪ್ಲಾನೆಟ್ ಅರ್ತ್” ಎನ್ನುವ ವಿಷಯದ ಕುರಿತು ಮೇಘಾಲಯದ ಶಿಲಾಂಗ್ ಐಐಎಂನಲ್ಲಿ ಉಪನ್ಯಾಸ ನೀಡುತ್ತಿರುವಾಗಲೇ ಕುಸಿದು ಬಿದ್ದರು. ಕೂಡಲೇ ಬೆಥನಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ಹೃದಯಾಘಾತದಿಂದ ಅವರ ಪ್ರಾಣಪಕ್ಷಿ ಆಗಲೇ ಹಾರಿ ಹೋಗಿತ್ತು.

ಮಾನ್ಯ ಅಬ್ದುಲ್ ಕಲಾಂ ಅವರ ಕೊನೆಯ ಟ್ವೀಟ್


ಎಲ್ಲೇ ಹೋದರೂ ಯುವ ಜನರ ಜತೆ ವಿದ್ಯಾರ್ಥಿಗಳ ಜತೆ ತಾನೂ ಮಗುವಂತಾಗುತ್ತಿದ್ದ ಅವರು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು, ಅವರ ಜೀವನ ಯಾತ್ರೆ ಕೂಡ ಪಾಠದಲ್ಲೇ ಅಂತ್ಯವಾಗಿತ್ತು.
ರಾಮೇಶ್ವರದ ಬಡ ಕುಟುಂಬದಲ್ಲಿ ಹುಟ್ಟಿದ ಅಬ್ದುಲ್ ಕಲಾಂ, ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಳ್ಳಲು ಪತ್ರಿಕೆ ಹಂಚುವ ಕೆಲಸ ಮಾಡುತ್ತಲೇ ತನ್ನ ಅಧ್ಯಯನವನ್ನು ಮಾಡುತ್ತಿದ್ದರು. ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಡಾಕ್ಟೊರೆಟ್ ಪದವಿ ಗಳಿಸಿದರು. ಡಿಆರ್‌ಡಿಒ ಮತ್ತು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದರು. ಇಡೀ ವಿಶ್ವವೇ ಭಾರತದತ್ತ ಬೆರಗುಕಣ್ಣುಗಳಿಂದ ನೋಡುವಂತಹ ಸಾಧನೆಗಳನ್ನು ಮಾಡಿದರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತರತ್ನ’ ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಇದಲ್ಲದೆ ಪದ್ಮ ಭೂಷಣ ಕೂಡ ಅವರಿಗೆ ಒಲಿದು ಬಂದಿತ್ತು. ಬ್ರಹ್ಮಚಾರಿಯಾಗಿದ್ದ ಅವರು, ತಮ್ಮ ಇಡೀ ಜೀವನವನ್ನು ಅಧ್ಯಯನ, ಸಂಶೋಧನೆ, ಬಾಹ್ಯಾಕಾಶ ಕಾರ್ಯಕ್ರಮಗಳ ಯೋಜನೆಗಳಿಗೆ ಮೀಸಲಿಟ್ಟರು.
ಮಿಸಾಯಿಲ್ ಮೆನ್ ಎಂದೇ ಖ್ಯಾತಿಯನ್ನು ಪಡೆದಿದ್ದ ಅಬ್ದುಲ್ ಕಲಾಂ ಅವರು ಉತ್ತಮ ವಿಜ್ಞಾನಿ ಮಾತ್ರವಲ್ಲದೆ ಅತ್ಯುತ್ತಮ ರಾಷ್ಟ್ರಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಇಂದಿಗೆ ಮಿಸಾಯಿಲ್ ಮೆನ್‌ನ ಪಯಾಣ ನಿಂತು ಭರ್ತಿ ಐದು ವರ್ಷ ಕಳೆದಿದೆ ಆದರೆ ಅವರ ಕನಸುಗಳು ಸ್ಪೂರ್ತಿದಾಯಕ ಬದುಕು ಎಂದಿಗೂ ನಮ್ಮೆಲ್ಲರಿಗೂ ಪ್ರೇರಣೆ ಎಂದಷ್ಟೆ ಹೇಳಬಲ್ಲೆ…

ಇತ್ತೀಚಿನ ಸುದ್ದಿ

ಜಾಹೀರಾತು