ಇತ್ತೀಚಿನ ಸುದ್ದಿ
ಮಹಾರಾಷ್ಟ್ರದಲ್ಲಿ ಒಂದೇ ದಿನ 232 ಪೊಲೀಸರಿಗೆ ಕೊರೋನಾ ಸೋಂಕು
August 1, 2020, 5:59 AM

ಮುಂಬೈ(reporterkarnataka news):
ಕಳೆದ 24 ಗಂಟೆ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 232 ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತ ಪೊಲೀಸರ ಸಂಖ್ಯೆ 9449ಕ್ಕೆ ತಲುಪಿದೆ.
1932 ಪೊಲೀಸರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಕ ಕೊರೋನಾ ಮತ್ತೆ ಓರ್ವ ಸಿಬ್ಬಂದಿಯ ಬಲಿಪಡೆದುಕೊಂಡಿದೆ. ಕೊರೋನಾದಿಂದ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ ಪೊಲೀಸರ ಸಂಖ್ಯೆ 103ಕ್ಕೆ ತಲುಪಿದೆ.