ಇತ್ತೀಚಿನ ಸುದ್ದಿ
ಮಲೆಯಾಳಂ ಚಿತ್ರರಂಗದಲ್ಲೂ ಮಾದಕ ದ್ರವ್ಯದ ಕಂಪನ
September 3, 2020, 7:55 AM

ತಿರುವನಂತಪುರಂ(reporterkarnataka news): ಕನ್ನಡ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿರುವ ಮಾದಕ ದ್ರವ್ಯ ಆರೋಪ ಮಲೆಯಾಳಂ ಚಿತ್ರರಂಗದಲ್ಲಿ ಕೂಡ ಕಂಪನ ಸೃಷ್ಟಿಸಿದೆ. ಕೇರಳದ ಹಿರಿಯ ರಾಜಕಾರಣಿಯೊಬ್ಬರ ಪುತ್ರ ಬಿನೇಶ್ ಕೊಡಿಯೋರಿ, ಮಾದಕ ದ್ರವ್ಯ ಜಾಲದ ಆರೋಪಿ ಅನೂಪ್ ಮೊಹಮ್ಮದ್ ಜತೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಮತ್ತು ಮುಸ್ಲಿಂ ಲೀಗ್ ಪಕ್ಷ ಆಗ್ರಹಿಸಿದೆ.
ಮಲೆಯಾಳಂ ಚಿತ್ರರಂಗದ ನಟ ನಟಿಯರ ಜತೆ ಆರೋಪಿ ಮೊಹಮ್ಮದ್ ಸಂಬಂಧ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಮಲೆಯಾಳಂ ಚಿತ್ರರಂಗದಲ್ಲಿ ಕೂಡ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.