ಇತ್ತೀಚಿನ ಸುದ್ದಿ
ಮಡಿಕೇರಿ ಬ್ರಹ್ಮಗಿರಿ ಬೆಟ್ಟ ಕುಸಿತ: ಅರ್ಚಕರ ಕುಟುಂಬದ ಸುರಕ್ಷತೆ ಬಗ್ಗೆ ಆತಂಕ
August 6, 2020, 7:14 AM

ಮಡಿಕೇರಿ(reporterkarnatakanews): ಕೊಡಗು ಜಿಲ್ಲೆಯ ತಲಕಾವೇರಿ ಬಳಿ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಅದರ ಕೆಳಭಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದ ಅರ್ಚಕರ ಕುಟುಂಬದ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.
ತಲಕಾವೇರಿ ದೇವಸ್ಥಾನದ ಅರ್ಚಕ ನಾರಾಯಣ ಆಚಾರ್, ಅವರ ಪತ್ನಿ ಮತ್ತು ಅವರ ಸಹೋದರ ಸೇರಿದಂತೆ ಯಾರನ್ನೂ ಕೂಡ ಸಂಪರ್ಕಿಸಲು ಇದುವರೆಗೆ ಸಾಧ್ಯವಾಗಿಲ್ಲ. ಇದು ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.
ಮಣ್ಣು ಕುಸಿದ ಸ್ಥಳ ತಲುಪುದು ಅತ್ಯಂತ ಕಷ್ಟಕರವಾಗಿದೆ. ಇದು ದುರ್ಗಮ ಪ್ರದೇಶವಾಗಿದ್ದು, ಸೂಕ್ತ ಸಂಪರ್ಕ ರಸ್ತೆಗಳು ಇಲ್ಲ.
ಅರ್ಚಕರ ಕುಟುಂಬದ ಎಲ್ಲ ಸದಸ್ಯರು ದೇವರ ದಯೆಯಿಂದ ಸುರಕ್ಷಿತರಾಗಿರಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸೇನೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದೆ.