ಇತ್ತೀಚಿನ ಸುದ್ದಿ
ಮಂಡ್ಯದ ಯಾವುದೇ ಕೆಲಸವಿದ್ದರೆ ನನ್ನ ಗಮನಕ್ಕೆ ತನ್ನಿ ಎಂದ ಸಂಸದ ಪ್ರತಾಪ ಸಿಂಹ: ಸುಮಲತಾ ವಿರುದ್ಧ ಟೀಕೆ
November 14, 2020, 12:35 PM

ಮೈಸೂರು(reporterkarnataka news): ಮಂಡ್ಯ ಸಂಸದರಾದ ಸುಮಲತಾ ಅವರ ಕಾರ್ಯ ವೈಖರಿ ಕುರಿತು ಮೈಸೂರು ಸಂಸದ ಪ್ರತಾಪ ಸಿಂಹ ಮಾಡಿರುವ ಟೀಕೆ ಇದೀಗ ವೈರಲ್ ಆಗಿದೆ.
ಸುಮಲತಾ ಅವರು ಯಾವುದೇ ಕೆಲಸ ಮಾಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ.
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧ ಸಂಸದೆ ಸುಮಲತಾ ಅವರು ಸಹಕಾರ ನೀಡುತ್ತಿಲ್ಲ ಎಂದು ಅಧಿಕಾರಿಯೊಬ್ಬರು ದೂರು ನೀಡಿದಾಗ ಪ್ರತಾಪ ಸಿಂಹ ಈ ಹೇಳಿಕೆ ನೀಡಿದ್ದಾರ ಎಂದು ವರದಿಯಾಗಿದೆ