ಇತ್ತೀಚಿನ ಸುದ್ದಿ
ಮಂಗಳೂರು – ಮುಂಬೈ ಮಧ್ಯೆ ಇಂಡಿಗೋ ವಿಮಾನ ಹಾರಾಟ ಆರಂಭ
July 24, 2020, 7:08 AM

ಮಂಗಳೂರು(reporterkarnataka news):
ಮಂಗಳೂರು- ಮುಂಬೈ ಮಧ್ಯೆ ಇಂಡಿಗೋ ವಿಮಾನ ಹಾರಾಟ ಶುಕ್ರವಾರದಿಂದ ಆರಂಭಗೊಂಡಿದೆ.
ವಾರದಲ್ಲಿ 4 ದಿನ ವಿಮಾನ ಹಾರಾಟ ನಡೆಸಲಿದೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಮಂಗಳೂರು- ಮುಂಬೈ ಮಧ್ಯೆ ವಾಯುಯಾನ ನಡೆಯಲಿದೆ. ಇಂಡಿಗೋ ವಿಮಾನ ಮುಂಬೈನಿಂದ ಬೆಳಗ್ಗೆ 9.30ಕ್ಕೆ ಪ್ರಯಾಣಿಸಲಿದೆ. ಮಂಗಳೂರಿಗೆ ಬೆಳಗ್ಗೆ 11 ಗಂಟೆಗೆ ತಲುಪಲಿದೆ. ಬೆಳಗ್ಗೆ 11.40ಕ್ಕೆ ಮಂಗಳೂರಿನಿಂದ ನಿರ್ಗಮಿಸಲಿದೆ. ಮಧ್ಯಾಹ್ನ 1.15ಕ್ಕೆ ಮುಂಬೈ ತಲುಪಲಿದೆ.
ವಿಮಾನ ಯಾನ ಮಾಡುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಕೊರೊನಾ ಮಾರ್ಗಸೂಚಿ ಪ್ರಕಾರವೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಅಪ್ ಲೋಡ್ ಮಾಡುವುದು ಕಡ್ಡಾಯವಾಗಿದೆ.