11:28 PM Friday4 - December 2020
ಬ್ರೇಕಿಂಗ್ ನ್ಯೂಸ್
ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ

ಇತ್ತೀಚಿನ ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ನವೆಂಬರ್ ವರೆಗೆ ಇಎಂಐ ವಿನಾಯಿತಿ?

July 24, 2020, 1:54 AM

ನವದೆಹಲಿ(reporterkarnataka news): ದೇಶಾದ್ಯಂತ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ ಮತ್ತೆ ಮೂರು ತಿಂಗಳ ಕಾಲ ಸಾಲದ ಇಎಂ ಐ ಕಟ್ಟಲು ವಿನಾಯಿತಿ ನೀಡುವ ಕುರಿತು ಚಿಂತನೆ ನಡೆಸಿದೆ.

ಈಗಾಗಲೇ 6 ತಿಂಗಳ ರಿಲೀಫ್ ನೀಡಿರುವ ಆರ್ ಬಿಐ ನವೆಂಬರ್ ವರೆಗೆ ವಿನಾಯಿತಿಯನ್ನು ವಿಸ್ತರಿಸಲು ಚಿಂತನೆ ನಡೆಸಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಕೊರೊನಾ ವೈರಸ್ ನಿಂದ ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದವರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿನಾಯಿತಿ ಮುಂದುವರಿಸುವ ಕುರಿತು ಚಿಂತನೆ ನಡೆದಿದೆ.

ದೇಶದಲ್ಲಿ ಕಳೆದ ಮಾರ್ಚ್ 22ರಂದು ಜನತಾ ಕರ್ಫ್ಯೂ ಹೇರಿದ ಬಳಿಕ ಸುಮಾರು 40 ದಿನಗಳ ಕಾಲ ಇಡೀ ದೇಶ ಲಾಕ್ ಡೌನ್ ಗೆ ಒಳಗಾಗಿತ್ತು. ಮತ್ತೆ ಅನ್ ಲಾಕ್ ಆದರೂ ಕರ್ನಾಟಕದಲ್ಲಿ ಕಳೆದ ಒಂದು ವಾರ ಎರಡನೇ ಅವಧಿಯ ಲಾಕ್ ಡೌನ್ ಜಾರಿಗೊಳಿಸಲಾಯಿತು. ಕೇರಳ ರಾಜ್ಯ ಮತ್ತೆ ಲಾಕ್ ಡೌನ್ ಕುರಿತು ಚಿಂತನೆ ನಡೆಸಿದೆ. ಈ ಎಲ್ಲ ಕಾರಣಗಳಿಂದ ಆರ್ ಬಿಐ ನವೆಂಬರ್ ವರೆಗೆ ಜನರಿಗೆ ರಿಲೀಫ್ ನೀಡುವ ಬಗ್ಗೆ ಅವಲೋಕನ ನಡೆಸುತ್ತಿದೆ.

ಕೊರೊನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಈಗಾಗಲೇ ಹದಗೆಟ್ಟಿದೆ. ವ್ಯಾಪಾರ, ಉದ್ಯಮಕ್ಕೆಲ್ಲ ಭಾರಿ ಹೊಡೆತ ನೀಡಿದೆ. ಸಾಕಷ್ಟು ಲಾಭದಲ್ಲಿರುವ ಕಂಪನಿಗಳು ಕೂಡ ಕೇವಲ 6 ತಿಂಗಳ ಕೊರೊನಾದ ನೆಪ ಹೇಳಿ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. 150 ವರ್ಷಗಳ ಇತಿಹಾಸವಿರುವ ಕಂಪನಿಗಳು ಕೂಡ ಕೊರೊನಾದ ನೆಪ ಹೇಳಿ ಹಂತ ಹಂತವಾಗಿ ಉದ್ಯೋಗಿಗಳನ್ನು ಕೈಬಿಡುತ್ತಿದೆ. ಇಷ್ಟೇ ಅಲ್ಲದೆ ಉದ್ಯೋಗಿಗಳಿಗೆ ನೀಡುವ ಟಿವಿಪಿ, ಎಲ್ ಟಿಎಗಳಿಗೂ ಕಣ್ಣ ಹಾಕಿದೆ. ಈ ವರ್ಷ ಯಾವುದೇ ಇನ್ ಕ್ರಿಮೆಂಟ್ ಇಲ್ಲವೆಂದು ಘೋಷಿಸಿದೆ.

ಕೆಲವು ಕಂಪನಿಗಳು ಶೇ. 10ರಿಂದ 30ರಷ್ಟು ವೇತನ ಕಡಿತಗೊಳಿಸಿದರೆ ಇನ್ನೂ ಕೆಲವು ಕಂಪನಿಗಳು ಶೇ. 50ರಷ್ಟು ವೇತನ ಕಡಿತ ಮಾಡಿ ದುಷ್ಟತನ ಮೆರೆದಿವೆ. ಇದರಿಂದ ಲಕ್ಷಗಟ್ಟಲೆ ಜನರು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು