ಇತ್ತೀಚಿನ ಸುದ್ದಿ
ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ವಾರ್ಷಿಕೋತ್ಸವ ಉದ್ಘಾಟನೆ
August 3, 2020, 7:48 AM

ಮಂಗಳೂರು(reporterkarnataka news): ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಉದ್ಘಾಟನೆಯನ್ನು ಮಿಲಾಗ್ರಿಸ್ ಚರ್ಚಿನ ಪ್ರಧಾನ ಗುರುಗಳಾದ ವಂದನೀಯ ಜೋಸೆಫ್ ಲೋಬೊ ನೆರವೇರಿಸಿದರು.
ಈ ಸಂದರ್ಭದಲ್ಲಿ 9 ದಿನಗಳ ನವನಾ ಪ್ರಾರ್ಥನೆಗೆ ಚಾಲನೆ ನೀಡಿದರು. ಬಳಿಕ ಬಲಿಪೂಜೆ ಹಾಗೂ ನವನಾವನ್ನು ನಡೆಸಿಕೊಟ್ಟರು. ಆಗಸ್ಟ್ 10ರಂದು ವಾರ್ಷಿಕೋತ್ಸವ ನಡೆಯಲಿದೆ.
ಚರ್ಚಿನ ಪ್ರಧಾನ ಗುರುಗಳಾದ ವಂದನೀಯ ಆ್ಯಂಡ್ರ್ಯೂ ಲಿಯೊ ಡಿಸೋಜ, ಸಹಾಯಕ ಗುರುಗಳಾದ ಕ್ಲಿಫರ್ಡ್ ಪಿಂಟೋ, ವಂದನೀಯ ರೂಪೇಶ್ ತಾವ್ರೊ, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ರೆಜಿನಾಲ್ಡ್ ಡಿಸೋಜ, ಕಾರ್ಯ ದರ್ಶಿ ಸ್ಟೀವನ್ ನೊರೊನ್ಹಾ, ಸಂಚಾಲಕ ಪ್ರಕಾಶ್ ಪಿಂಟೋ ಉಪಸ್ಥಿತರಿದ್ದರು.