4:34 PM Thursday3 - December 2020
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ 

ಇತ್ತೀಚಿನ ಸುದ್ದಿ

ಬಿಸ್ನೆಸ್ ಮ್ಯಾಗ್ನೆಟ್ ಬಿ.ಆರ್. ಶೆಟ್ಟಿ ಆಸ್ತಿ ಮುಟ್ಟುಗೋಲು:  ದುಬೈ ಕೋರ್ಟ್ ಆದೇಶ

July 26, 2020, 9:58 AM

ನವದೆಹಲಿ(reporterkaranataka news): ಜಗತ್ತಿನ ಶ್ರೀಮಂತ ಬಿಸ್ನೆಸ್ ಮ್ಯಾಗ್ನೆಟ್ ಗಳಲ್ಲಿ ಮುಂಚೂಣಿ ಯಲ್ಲಿರುವ ಯುಎಇಯ ಅತಿದೊಡ್ಡ ಖಾಸಗಿ ಸ್ವಾಮ್ಯದ ಎನ್ ಎಂಸಿ ಹೆಲ್ತ್‌ಕೇರ್ ಆಪರೇಟರ್ ಸಂಸ್ಥಾಪಕ  ಬಿ. ಆರ್. ಶೆಟ್ಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೆಷ್ಟೋ ಮಂದಿ ಭಾರತೀಯರಿಗೆ ಉದ್ಯೋಗ ನೀಡಿದ ಅವರ ಆಸ್ತಿ ಯನ್ನು ಮುಟ್ಟುಗೋಲು ಹಾಕಲು ದುಬೈ ಕೋರ್ಟ್ ಆದೇಶ ನೀಡಿದೆ. 

ದುಬೈ ಬ್ಯಾಂಕಿಗೆ 8 ಮಿಲಿಯನ್ ಡಾಲರ್ ಗೆ ಅಧಿಕ ಸಾಲವನ್ನು ಬಾಕಿ ಉಳಿಸಿದ್ದ  ಬಿ.ಆರ್.ಶೆಟ್ಟಿ ಅವರಿಗೆ ಸೇರಿದ ಜಗತ್ತಿನ ನಾನಾ ಕಡೆಗಳಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನ್ಯೂ  ಮೆಡಿಕಲ್ ಸೆಂಟರ್ ಟ್ರೇಡಿಂಗ್ ಮತ್ತು ಎನ್‌ಎಂಸಿ ಹೆಲ್ತ್‌ಕೇರ್ ವಿರುದ್ಧ ಡಿಐಎಫ್‌ಸಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದ ದುಬೈ ಕ್ರೆಡಿಟ್ ಯುರೋಪ್ ಬ್ಯಾಂಕ್‌ನ ಪರವಾಗಿ  ದುಬೈ ನ್ಯಾಯಾಲಯ ದಲ್ಲಿ ತೀರ್ಪು ಪ್ರಕಟವಾಗಿದೆ.

ಬಿ.ಆರ್.ಶೆಟ್ಟಿ  ಅವರೀಗದುಬೈ ನಿಂದ  ಭಾರತಕ್ಕೆ ಆಗಮಿಸಿ, ನಿಗೂಢವಾಗಿದ್ದಾರೆ. ಅವರ ಅಬುಧಾಬಿ ಮತ್ತು ದುಬೈಯಲ್ಲಿರುವ  ಆಸ್ತಿ ಜತೆಗೆ ಎನ್‌ಎಂಸಿ ಹೆಲ್ತ್, ಫಿನಾಬ್ಲರ್, ಬಿಆರ್‌ಎಸ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಮತ್ತು ಇತರ ಕಂಪನಿಗಳ ಷೇರುಗಳು ಮುಟ್ಟುಗೋಲಾಗುವ ಆಸ್ತಿಗಳ ಸಾದ್ಯಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಾಮಾನ್ಯ ಜೀವನ ವೆಚ್ಚಗಳು ಮತ್ತು ಕಾನೂನು ಸಲಹೆ ಮತ್ತು ಪ್ರಾತಿನಿಧ್ಯಕ್ಕಾಗಿ ಸಮಂಜಸವಾದ ಮೊತ್ತದ ಮೇಲೆ ಪ್ರತಿ ವಾರ $ 7,000 ವರೆಗೆ ಖರ್ಚು ಮಾಡಲು ನ್ಯಾಯಾಲಯ ಅನುಮತಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು