ಇತ್ತೀಚಿನ ಸುದ್ದಿ
ಬಾಲಿವುಡ್ ನಟ ಸುಶಾಂತ್ ಮ್ಯಾನೇಜರ್ ದಿಶಾ ಸಾಲ್ಯಾನ್ ಆತ್ಮಹತ್ಯೆ: ಬಿಹಾರ ಪೊಲೀಸರಿಂದ ತನಿಖೆ
August 2, 2020, 11:02 AM

ಮುಂಬೈ(reporterkarnatakanews): ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬೆನ್ನತ್ತಿರುವ ಬಿಹಾರ ಪೊಲೀಸರು ಇದೀಗ ದಿಶಾ ಸಾಲ್ಯಾನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೂಡ ತನಿಖೆ ನಡೆಸಲು ನಿರ್ಧರಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಚಿತ್ರರಂಗದಲ್ಲಿ ಮಿಂಚಲು ದಿಶಾ ಸಾಲ್ಯಾನ್ ನೆರವು ನೀಡಿದ್ದರು. ಸುಶಾಂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ದಿಶಾ ಸಾಲ್ಯಾನ್ ಆತ್ಮಹತ್ಯೆ ಗೆ ಶರಣಾದ ಒಂದೇ ವಾರದಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ್ದರು.ಈ ಮಧ್ಯೆ ಹಿರಿಯ ಐಪಿಎಸ್ ಅಧಿಕಾರಿಯನ್ನು ಸುಶಾಂತ್ ಸಿಂಗ್ ನಿಗೂಢ ಸಾವಿನ ತನಿಖೆಯ ಉಸ್ತುವಾರಿಯನ್ನಾಗಿ ಬಿಹಾರ ಸರಕಾರ ನೇಮಕ ಮಾಡಿದೆ. ಪಾಟ್ನ ನಗರ ಎಸ್ ಪಿ, ವಿನಯ್ ತಿವಾರಿ ಇದರ ನೇತೃತ್ವ ವಹಿಸಲಿದ್ದಾರೆ.