ಇತ್ತೀಚಿನ ಸುದ್ದಿ
ಬಾಲಿವುಡ್ ನಟ ಸುಶಾಂತ್ ನಿಗೂಢ ಸಾವು: ಎನ್ ಸಿಬಿಯಿಂದ ರಿಯಾ ಚಕ್ರವರ್ತಿ ಬಂಧನ
September 8, 2020, 12:17 PM

ಮುಂಬೈ(reporterkarnataka news): ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಕುರಿತಂತೆ ಮಾದಕ ದ್ರವ್ಯ ಆಯಾಮದಲ್ಲಿ ನಡೆಸಲಾದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಅವರನ್ನು ಎನ್ ಸಿ ಬಿ ಬಂಧಿಸಿದೆ.
ಮೂರು ದಿನಗಳ ಕಾಲ ನಡೆದ ಸುದೀರ್ಘ ವಿಚಾರಣೆ ಬಳಿಕ ಎನ್ ಸಿ ಬಿ ಈ ಮಹತ್ವದ ಕ್ರಮ ಕೈಗೊಂಡಿದೆ.
ಸುಶಾಂತ್ ಸಿಂಗ್ ಅವರಿಗೆ ಮಾದಕ ದ್ರವ್ಯ ಪೂರೈಕೆ ಸೇರಿದಂತೆ ಹಲವು ಆರೋಪಗಳನ್ನು ರಿಯಾ ಎದುರಿಸುತ್ತಿದ್ದಾರೆ. ರಿಯಾ ಸಹೋದರನನ್ನು ಈಗಾಗಲೇ ಎನ್ ಸಿ ಬಿ ಬಂಧಿಸಿದೆ. ಎನ್ ಡಿ ಪಿ ಎಸ್ ಕಾನೂನಿನ ಅಡಿಯಲ್ಲಿ ರಿಯಾ ಚಕ್ರವರ್ತಿಯನ್ನು ಇದೀಗ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಬಂಧಿಸಿದೆ.