10:02 PM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಬಾಲಿವುಡ್ ನಟ ಸುಶಾಂತ್ ಖಾತೆಯಿಂದ 15 ಕೋಟಿ ವರ್ಗಾವಣೆ: ಬಿಹಾರ ಪೊಲೀಸರು ಮುಂಬೈಗೆ

July 30, 2020, 5:33 AM

ಮುಂಬೈ(reporterkarnataka news): ಬಾಲಿವುಡ್ ನಟ ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ 15 ಕೋಟಿ ರೂ. ವರ್ಗಾವಣೆ ಸಂಬಂಧಿಸಿದಂತೆ ತನಿಖೆಗೆ ಬಿಹಾರ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರೇಯಸಿ ಎನ್ನಲಾದ ರಿಯಾ ಚಕ್ರವರ್ತಿ ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಆರೋಪಿಸಿದ್ದಾರೆ. ಈ ಮಧ್ಯೆ ತನ್ನ ಮೇಲಿನ ಎಲ್ಲ ಪ್ರಕರಣಗಳನ್ನು ಬಿಹಾರದಿಂದ ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಸುಶಾಂತ್ ಸಿಂಗ್ ಕರ್ನಾಟಕದ ಕೊಡಗಿನಲ್ಲಿ ಕೃಷಿ ಜೀವನ ಆರಂಭಿಸಲು ಬಯಸಿದ್ದರು. ಆದರೆ ರಿಯಾ ಅವಕಾಶ ನೀಡಲಿಲ್ಲ. ಮುಂಬೈಯಲ್ಲೇ ಸುಶಾಂತ್ ಉಳಿಯುವಂತೆ ಒತ್ತಾಯಿಸಿದ್ದರು. ಸುಶಾಂತ್ ನ ವೈದ್ಯಕೀಯ ವರದಿಯನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದರು. ಸುಶಾಂತ್ ನ ಮಾನಸಿಕ ಸ್ಥಿತಿ ಬಹಿರಂಗವಾದರೆ ಅವರಿಗೆ ಎಲ್ಲೂ ಅವಕಾಶ ಸಿಗುವುದಿಲ್ಲ ಎಂದು ಬೆದರಿಸಿದ್ದರು. ಸುಶಾಂತ್ ನ ನಗದು, ಕ್ರೆಡಿಟ್, ಡೆಬಿಟ್ ಕಾರ್ಡ್, ಲ್ಯಾಪ್ ಟಾಪ್, ಆಭರಣ, ವೈದ್ಯಕೀಯ ವರದಿ ಎಲ್ಲವನ್ನೂ ಕೊಂಡು ಹೋಗಿದ್ದಾರೆ. ಜತೆಗೆ ಸುಶಾಂತ್ ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ಸುಶಾಂತ್ ತಂದೆ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು