ಇತ್ತೀಚಿನ ಸುದ್ದಿ
ಬಜಪೆ : ಮಾಸ್ಕ್ ಹಾಕದಿದ್ದರೆ ರೂ.100 ದಂಡ
July 22, 2020, 1:40 PM

reporterkarnatakanews / Bajpe
ಜು.23ರಿಂದ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗುದರಿಂದ ಕೆಲವೊಂದು ಷರತ್ತಿಗೊಳಪಟ್ಟು ಸಾರ್ವಜನಿಕ ಓಡಾಟಕ್ಕೆ ಸರಕಾರವು ಅನುವು ಮಾಡಿಕೊಟ್ಟಿದ್ದು, ಪ್ರತಿಯೊಬ್ಬ ನಾಗರೀಕರು ಸಾರ್ವಜನಿಕ ಸ್ಥಳಗಳು,ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳು ಮತ್ತು ಸಾರಿಗೆಯಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಎಂದು ಬಜಪೆ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಧರಿಸದಿದ್ದರೆ ರೂ.100/- ದಂಡವನ್ನು ವಿಧಿಸಲು ಪಂಚಾಯತಿಗೆ ಸರಕಾರವು ಆದೇಶ ನೀಡಿರುತ್ತದೆ. ಪಂಚಾಯತಿ ವ್ಯಾಪ್ತಿಯ ಅಂಗಡಿಗಳಲ್ಲಿ,ಹೋಟೆಲ್ ಗಳಲ್ಲಿ ಮತ್ತು ವಾಹನದಲ್ಲಿ ಸಂಚರಿಸುವಾಗ ಮಾಸ್ಕ್ ಹಾಕದೇ ಇದ್ದಲ್ಲಿ ಆರಕ್ಷಕ ಅಧಿಕಾರಿಗಳ ಸಹಕಾರದಿಂದ ದಂಡನೆಯನ್ನು ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.