ಇತ್ತೀಚಿನ ಸುದ್ದಿ
ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಇಂದು ಭಾರತಕ್ಕೆ ಆಗಮನ
July 29, 2020, 2:55 AM

ನವದೆಹಲಿ(reporterkarnatka news):
ಭಾರತಕ್ಕೆ ಹೊರಟಿರುವ ರಫೇಲ್ ಯುದ್ಧ ವಿಮಾನ ಇಂದು ಅಂಬಾಲ ವಾಯುನೆಲೆಯಲ್ಲಿ ಬಂದಿಳಿಯಲಿವೆ.
ವಿಮಾನಗಳ ಭವ್ಯ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಯು ಸೇನಾ ಮುಖ್ಯಸ್ಥರು ಸೇರಿದಂತೆ ಹಿರಿಯ ವಾಯುಪಡೆ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ
ಇದೇ ವೇಳೆ ದಾರಿ ಮಧ್ಯೆ ಫ್ರಾನ್ಸ್ ನಿಂದ ಭಾರತಕ್ಕೆ ಹೊರಟಿರುವ ರಫೇಲ್ ಯುದ್ಧ ವಿಮಾನ ಆಕಾಶದಲ್ಲಿ ಇಂಧನ ತುಂಬಿಸಿದೆ. 30000 ಸಾವಿರ ಅಡಿ ಎತ್ತರದಲ್ಲಿ ಈ ವಿಮಾನಗಳಿಗೆ ಇಂಧನ ತುಂಬಿಸಲಾಗಿದೆ.
36 ರಫೇಲ್ ವಿಮಾನಗಳ ಪೈಕಿ ಇದೀಗ ಮೊದಲ ಹಂತವಾಗಿ ಐದು ವಿಮಾನಗಳು ಭಾರತಕ್ಕೆ ಆಗಮಿಸುತ್ತಿವೆ.