ಇತ್ತೀಚಿನ ಸುದ್ದಿ
ಪ್ರಾಸ ಭಂಡಾರ ಕಾರ್ಕಳ ಶೇಖರ ಭಂಡಾರಿ ನಿಧನ
August 10, 2020, 5:11 AM

ಮಂಗಳೂರು (reporter Karnataka)
ಹಿರಿಯ ತುಳು ಚಲನಚಿತ್ರ ನಟ ರಂಗಕರ್ಮಿ ಹಾಗೂ ಸಾಹಿತಿ
ಕಾರ್ಕಳ ಶೇಖರ್ ಭಂಡಾರಿ ನಿಧನ.
ಸದಾ ಚಟುವಟಿಕೆಗಳಿಂದ ಕೂಡಿಕೊಂಡಿದ್ದು, ಲವಲವಿಕೆಯ ವ್ಯಕ್ತಿತ್ವ ಶೇಖರ್ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ, ತುಳು ಚಿತ್ರರಂಗ ಹಾಗೂ ರಂಗಭೂಮಿ ಕ್ಷೇತ್ರದ ಜತೆಗೆ ಸಾಹಿತಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ನ್ಯುಮೋನಿಯದಿಂದ ಬಳಲುತ್ತಿದ್ದು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.