ಇತ್ತೀಚಿನ ಸುದ್ದಿ
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ
July 21, 2020, 11:34 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ಈ ಬಾರಿ ಪಿಎಂ ಮೋದಿ ಸರ್ಕಾರ ಕಳೆದ ಆರು ತಿಂಗಳಲ್ಲಿ ಮಾಡಿದ ಆರು ಸಾಧನೆಗಳ ಪಟ್ಟಿಯನ್ನು ಟ್ವೀಟ್ ಮಾಡುವ ಮೂಲಕ ವಿನೂತನವಾಗಿ ರಾಹುಲ್ ಪಿಎಂ ಮೋದಿ ಕಾಲೆಳೆದಿದ್ದಾರೆ.
ಹೌದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 11 ಲಕ್ಷ ದಾಟಿದೆ. ಹೀಗಿರುವಾಗ ಪ್ರಧಾನಿ ಮೋದಿ ಈ ಕೊರೋನಾತಂಕದ ಸಮಯದಲ್ಲಿ ಮಾಡಿದ ಸಾಧನೆಗಳು ಎಂದು ಆರು ಅಂಶಗಳ ಪಟ್ಟಿಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರಾಜಸ್ಥಾನ ಸರ್ಕಾರ ಉರುಳಿಸಲು ಯತ್ನಿಸಿದ ಆರೋಪವನ್ನೂ ಮಾಡಲಾಗಿದೆ.
ರಾಹುಲ್ ಮಾಡಿದ ಪಟ್ಟಿಯಲ್ಲಿರುವ ಅಂಶಗಳು
ಫೆಬ್ರವರಿ- ನಮಸ್ತೇ ಟ್ರಂಪ್
ಮಾರ್ಚ್- ಮಧ್ಯಪ್ರದೇಶದಲ್ಲಿ ಸರ್ಕಾರ ಉರುಳಿಸಿದರು
ಏಪ್ರಿಲ್: ಮೇಣದ ಬತ್ತಿ ಹಚ್ಚಿಸಿದ್ರು
ಮೇ: ಸರ್ಕಾರದ ಆರನೇ ವಾರ್ಷಿಕೋತ್ಸವ
ಜೂನ್: ಬಿಹಾರದಲ್ಲಿ ವರ್ಚುವಲ್ Rally
ಜುಲೈ: ರಾಜಸ್ಥಾನ ಸರ್ಕಾರ ಉರುಳಿಸುವ ಯತ್ನ
ಇದೇ ಕಾರಣದಿಂದ ದೇಶ ಕೊರೋನಾ ಸಮರದಲ್ಲಿ ‘ಆತ್ಮನಿರ್ಭರ’ವಾಗಿದೆ ಎಂದೂ ಟ್ವೀಟ್ನ ಅಂತ್ಯದಲ್ಲಿ ಬರೆದಿದ್ದಾರೆ.