5:01 AM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಪೊಲೀಸ್ ಠಾಣೆಗೊಂದು ವೈರಸ್ ಕೊಲ್ಲವ ಯಂತ್ರ! 

July 25, 2020, 6:06 AM

ಮಂಗಳೂರು(reporterkarnataka news):

ಪೊಲೀಸರಿಗೆ ಕರೋನ ಸೋಂಕು ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಪೊಲೀಸ್ ಠಾಣೆಗಳಿಗೆ ವೈರಸ್ ಗಳನ್ನು ಕೊಲ್ಲುವ ಅಲ್ಟ್ರಾ ವೈಲಟ್ ಸ್ಕ್ಯಾನರ್ ಯಂತ್ರೋಪಕರಣಗಳನ್ನು ನೀಡಿದೆ. ರಾಜ್ಯದಲ್ಲಿ ಕರೋನ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಇದನ್ನು ನೀಡಲಾಗುತ್ತಿದೆ. 

ಈ ಯಂತ್ರದಲ್ಲಿ ಕಾಗದ ಪತ್ರ, ಮೊಬೈಲ್, ಕೀಬಂಚ್ ಮೊದಲಾದ ಸೊತ್ತುಗಳನ್ನು 4- ರಿಂದ 10 ನಿಮಿಗಳ ಕಾಲ ಇಟ್ಟರೆ ಅದರಲ್ಲಿರುವ ಎಲ್ಲ ರೀತಿಯ ವೈರಸ್ ಗಳು ನಾಶವಾಗುತ್ತವೆ. 

ಆರೋಪಿಗಳಿಂದ ವಶಪಡಿಸಿಕೊಂಡ, ಮೊಬೈಲ್, ಕೀಬಂಚ್ ಇನ್ನಿತರ ಸೊತ್ತುಗಳನ್ನು ಈ ಯಂತ್ರದಲ್ಲಿ ಹಾಕಿದರೆ ಸೋಂಕು ಹರಡುವುದು ತಪ್ಪುತ್ತದೆ. 

ದೂರು ನೀಡಲು ಬರುವವರ ದೂರು- ಪತ್ರಗಳು ಮೊದಲಾದ ಕಾಗದಗಳನ್ನು ಯಂತ್ರ ದಲ್ಲಿ ಹಾಕುವ ಮೂಲಕ ಕರೋನಾ ವೈರಸ್ ಮೊದಲಾದ ಸೋಂಕಿನ‌ ವೈರಾಣುಗಳಿಂದ ಮುಕ್ತಿ ಲಭಿಸಲಿದೆ. 

ಮಂಗಳೂರು ಪೊಲೀಸ್ ಕಮಿಷನರೇಟ್  ವ್ಯಾಪ್ತಿಯ 21 ಪೊಲೀಸ್ ಠಾಣೆಗಳಿಗೆ ಯುವಿ ಯಂತ್ರವನ್ನು ವಿತರಿಸಲಾಗಿದೆ. 

ಮಂಗಳೂರು ನಗರದಲ್ಲಿ ಅತಿ ವೇಗವಾಗಿ ಕರೋನಾ ಹರಡುತ್ತಿರುವುದರಿಂದ ಈ ಯಂತ್ರಗಳನ್ನು ವಿತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಠಾಣೆಗೆ ಈವತ್ತು ಯಂತ್ರ ಬಂದಿದೆ. ವಸ್ತುಗಳನ್ನು ಅದರೊಳಗೆ ಇಟ್ಟರೆ ವೈರಸ್ ನಾಶವಾಗುತ್ತದೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ನಾವು ಪ್ರಯೋಗ ಆರಂಭಿಸಿದ್ದೇವೆ ಠಾಣೆಯ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಗ್ ವ್ಯಾಪ್ತಿಯ 4 ಪೊಲೀಸ್ ಠಾಣೆಗಳಿಗೆ ಮಾತ್ರ ಇದುವರೆಗೆ ಯುವಿ ಯಂತ್ರ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. 

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಗಳಿಗೆ ದೊಡ್ಡದಾದ ಅಲ್ಟ್ರಾ ವೈಲಟ್ ವೈರಸ್ ಸ್ಕ್ಯಾನರ್ ಯಂತ್ರಗಳನ್ನು ಬಳಸಲಾಗುತ್ತಿದೆ.

 ಈ ಯುವಿ ಯಂತ್ರೋಪಕರಣಗಳು  ವೈರಸ್ ಗಳನ್ನು  ಶೇ.99.999 ರಷ್ಟು ಕೊಲ್ಲುತ್ತದೆ ಎಂದು ಸಂಸ್ಥೆಯು ಹೇಳಿಕೊಳ್ಳುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು