ಇತ್ತೀಚಿನ ಸುದ್ದಿ
ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಕರಾವಳಿಯಲ್ಲಿ 4 ಸಾವಿರ ಹೊಸ ಉದ್ಯೋಗ ಸೃಷ್ಟಿ
August 6, 2020, 2:41 PM

ಮಂಗಳೂರು(reporterkarnatakanews): ಕೊರೊನಾದಿಂದ ಒಂದೆಡೆ ಜನರು ನೌಕರಿ ಕಳೆದುಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಭರವಸೆಯ ಬೆಳಕು ಹರಿದು ಬರುತ್ತಿದೆ. ಸ್ವಾಫ್ಟ್ ವೇರ್ ಕ್ಷೇತ್ರದ ದೈತ್ಯ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಕರಾವಳಿ ಭಾಗದ ಜನತೆಗೆ 4 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಲಿವೆ.
ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಟಿಸಿಎಸ್ ಶಾಖೆ ತೆರೆಯಲಿದೆ. ಸುಮಾರು 38 ಎಕರೆ ಪ್ರದೇಶದಲ್ಲಿ ಶಾಖೆ ಕಾರ್ಯನಿರ್ವಹಿಸಲಿದೆ.
ಹೊಸ ಉದ್ಯೋಗ ಸೃಷ್ಟಿಯ ಹಿನ್ನೆಲೆಯಲ್ಲಿ ಈ ವರ್ಷ ಮಾರ್ಚ್ ನಿಂದ ರಾಜ್ಯದಲ್ಲಿ 27101.39 ಕೋಟಿ ಬಂಡವಾಳ ಹರಿದು ಬಂದಿದೆ. ಇದರಿಂದ ರಾಜ್ಯದಲ್ಲಿ 46 ಸಾವಿರ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಕರಾವಳಿ ಭಾಗದ ಜನರಿಗೆ 4 ಸಾವಿರಕ್ಕೂ ಹೆಚ್ಚು ಉದ್ಯೋಗ ಸಿಗಲಿದೆ.
ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಮಂಗಳೂರು ಭಾಗದ ಜನರಿಗೆ 4500 ಉದ್ಯೋಗ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.