ಇತ್ತೀಚಿನ ಸುದ್ದಿ
ಕೇರಳ ವಿಮಾನ ದುರಂತ: ನಾಗರಿಕ ವಿಮಾನಯಾನ ಸಚಿವರಿಂದ ಮಾಹಿತಿ ಸಂಗ್ರಹ
August 8, 2020, 9:02 AM

ಕರಿಪುರಂ(reporterkarnataka news): ದೇಶವನ್ನೇ ಬೆಚ್ಚಿ ಬೀಳಿಸಿದ ಕೇರಳ ವಿಮಾನ ದುರಂತದ ತನಿಖೆ ಬಿರುಸುಪಡೆದುಕೊಂಡಿದೆ. ಈ ಮಧ್ಯೆ 18 ಮಂದಿಯನ್ನು ಬಲಿಪಡೆದುಕೊಂಡ ಕೇರಳದ ಕರಿಪುರಂ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ಭೇಟಿ ನೀಡಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಅವರು, ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಕೇಂದ್ರ ಸಚಿವ ವಿ . ಮುರಳೀಧರನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಪೂರಕ ಮಾಹಿತಿ ನೀಡಿದರು.
ಅಪಘಾತಕ್ಕೀಡಾದ ವಿಮಾನದ ಡಿಜಿಟಲ್ ಫ್ಲೈಟ್ ಡಾಟ ರೆಕಾರ್ಡ್ ರ್ ಮತ್ತು ಕಾಕ್ ಪಿಟ್ ವಾಯ್ಸ್ ರೆಕಾರ್ಡ್ ಸಂಗ್ರಹಿಸುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ. ಇದು ದುರಂತದ ಬಗ್ಗೆ ಬೆಳಕು ಚೆಲ್ಲಲಿದೆ. . ವಿಮಾನ ದುರಂತದಲ್ಲಿ ಗಾಯಗೊಂಡಿರುವ 13 ಮಂದಿಯ ಸ್ಥಿತಿ ಇದೀಗ ಗಂಭೀರವಾಗಿದೆ.