ಇತ್ತೀಚಿನ ಸುದ್ದಿ
ನನ್ನ ಕಾಲದಲ್ಲಿ ವರ್ಷದೊಳಗೆ ಇಬ್ಬರು ಡಿಸಿ ಅಧಿಕಾರದಿಂದ ನಿರ್ಗಮಿಸಿಲ್ಲ: ಉಸ್ತುವಾರಿ ಹೇಳಿಕೆಗೆ ಮಾಜಿ ಉಸ್ತುವಾರಿ ಟಾಂಗ್
July 30, 2020, 3:19 PM

ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಅಧಿಕಾರಾವಧಿಯಲ್ಲಿ ಒಂದು ವರ್ಷದೊಳಗೆ ಇಬ್ಬರು ಜಿಲ್ಲಾಧಿಕಾರಿಗಳು ಅಧಿಕಾರದಿಂದ ನಿರ್ಗಮಿಸುವ ಸನ್ನಿವೇಶ ಉಂಟಾಗಿಲ್ಲ ಎಂದು ಮಾಜಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ‘ಖಾದರ್ ಕಾಲವಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತದಲ್ಲಿ ಒಂದೇ ವರ್ಷದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಧಿಕಾರದಿಂದ ನಿರ್ಗಮಿಸಿದ್ದಾರೆ. ಕನಿಷ್ಠ ಒಂದೂವರೆ ಎರಡು ವರ್ಷ ಅವರಿಗೆ ಅವಕಾಶ ನೀಡಬೇಕಿತ್ತು ಎಂದು ಅವರು ನುಡಿದರು.
ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವದ ಮುಖ ತೆರೆದ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಟೀಕೆಗೆ ಉತ್ತರಿಸಿದ ಅವರು, ಮೃತದೇಹಕ್ಕೂ ನಾವು ಗೌರವ ಕೊಡಬೇಕು. ಭಾರತೀಯ ಸಂಸ್ಕೃತಿಯಲ್ಲಿ ಮೃತದೇಹಕ್ಕೂಗೌರವವಿದೆ. ಆಯಾ ಧರ್ಮದ ಪದ್ದತಿ ಪ್ರಕಾರ ಅಂತಿಮ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನಡೆಸಬೇಕು.
ಉಸ್ತುವಾರಿ ಸಚಿವರು ಮೃತ ವ್ಯಕ್ತಿಯ ಮನೆಯವರ ಮನವೊಲಿಸಿ ಅವರ ಉಪಸ್ಥಿತಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಕವಿತಾ ಸನಿಲ್ ಮುಂತಾದವರು ಉಪಸ್ಥಿತರಿದ್ದರು.