ಇತ್ತೀಚಿನ ಸುದ್ದಿ
ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕನ್ನಡ ಚಿತ್ರರಂಗ ಸಮಾವೇಶ: ಕಲಾವಿದರ ಸಂಕಷ್ಟದ ಕುರಿತು ಚರ್ಚೆ
July 30, 2020, 3:35 AM

ಬೆಂಗಳೂರು(reporterkarnataka news):
ಸ್ಯಾಂಡಲ್ ವುಡ್ ಕಲಾವಿದರು ನಟ ಶಿವರಾಜ್ ಕುಮಾರ್ ಮನೆಯಲ್ಲಿ ಒಟ್ಟು ಸೇರಿದ್ದಾರೆ. ಕೊರೊನಾದಿಂದ ಚಿತ್ರರಂಗ ಸ್ತಬ್ದಗೊಂಡಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆದಿದೆ. ಹಲವು ಬೇಡಿಕೆ, ಮನವಿಯನ್ನು ಸರಕಾರದ ಮುಂದಿಡಲಾಗಿದೆ.
ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಯಿತು. ಚಿತ್ರರಂಗದ ದಿನಗೂಲಿ ನೌಕರರು, ಸಾಧಾರಣ ಕಲಾವಿದರ ಕಷ್ಟದ ಬಗ್ಗೆ ಚರ್ಚಿಸಲಾಯಿತು.
ಥಿಯೇಟರ್ ಗಳು ಸದ್ಯದ ಪರಿಸ್ಥಿತಿಯಲ್ಲಿ ತೆರೆಯುವ ಲಕ್ಷಣ ಕಂಡು ಬರುತ್ತಿಲ್ಲ. ಪ್ರಸಕ್ತ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಯೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಶಿವರಾಜ್ ಕುಮಾರ್ ನೇತೃತ್ವ ವಹಿಸಿ ಸಭೆ ನಡೆಸಿದ್ದಾರೆ.
ಕಷ್ಟಕಾಲದಲ್ಲಿ ಚಿತ್ರರಂಗದ ದಿನಗೂಲಿ ನೌಕರರಿಗೆ, ಸಹ ಕಲಾವಿದರಿಗೆ ಸಹಾಯ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಕೂಡ ಪಾಲ್ಗೊಂಡಿದ್ದರು.
ಕಿರುತೆರೆಯ ಕಲಾವಿದರು, ಸಹಕಲಾವಿದರು, ಉದ್ಯಮ ಅವಲಂಬಿಸಿದ ಇತರರಿಗೆ ಪ್ಯಾಕೇಜ್ ನೀಡುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಎಂ ಎಸ್ ಎಂ ಇ ಅಡಿಯಲ್ಲಿ ಸೇರಿಸುವ ಕುರಿತು ಆಗ್ರಹಿಸಲಾಯಿತು. ತೆರಿಗೆ ವಿನಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಚಿತ್ರರಂಗ ಸಲ್ಲಿಸಿದೆ.
ಉಪೇಂದ್ರ, ರವಿಚಂದ್ರನ್, ಯಶ್ ಸೇರಿದಂತೆ ಪ್ರಮುಖ ನಟರು ಹಾಜರಿದ್ದರು. ಸುದೀಪ್ ಹಾಗೂ ದರ್ಶನ್ ಗೈರು ಹಾಜರಾಗಿದ್ದರು.