ಇತ್ತೀಚಿನ ಸುದ್ದಿ
ದ.ಕ.: ಕೊರೊನಾಕ್ಕೆ ಇಂದು ನಾಲ್ವರು ಬಲಿ
July 18, 2020, 3:32 PM
8:47 PM (7 minutes ago)
ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 204 ಪ್ರಕರಣಗಳು ಪತ್ತೆಯಾಗಿವೆ.
ಸಾವಿಗೀಡಾದವರಲ್ಲಿ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ. 49 ವರ್ಷ, 61 ಹಾಗೂ 74 ವರ್ಷದ ಮೂವರು ಮಹಿಳೆಯರು ಹಾಗೂ 67 ರ ಹರೆಯದ ಒಬ್ಬ ಪುರುಷ ಕೊರೋನಾದಿಂದ ಸಾವು ಕಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 75 ಕ್ಕೆ ಏರಿಕೆ
ಜಿಲ್ಲೆಯಲ್ಲಿ ದಿನ ಕಳೆದಂತೆ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.