ಇತ್ತೀಚಿನ ಸುದ್ದಿ
ದೇಶದಲ್ಲಿ ಕೊರೋನಾ ಅಟ್ಟಹಾಸಕ್ಕೆ ಒಂದೇ ದಿನ 740 ಬಲಿ
July 24, 2020, 4:59 AM

ನವದೆಹಲಿ(reporterkarnatakanews): ದೇಶದಲ್ಲಿ ಮಾರಕ ಕೊರೊನಾದ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವದಿಯಲ್ಲಿ ಹೊಸದಾಗಿ 49, 310 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಹದಿಮೂರು ಲಕ್ಷದ ಹತ್ತಿರ ತಲುಪಿದೆ. 12, 87, 945 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇವರಲ್ಲಿ 4, 40, 135 ಮಂದಿ ವಿವಿಧ ಕೊರೋನಾ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾದಿಂದ 740 ಮಂದಿಯ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾದಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 30, 601ಕ್ಕೆ ತಲುಪಿದೆ.