ಇತ್ತೀಚಿನ ಸುದ್ದಿ
ದೇಶದಲ್ಲಿ ಒಂದೇ ದಿನ ಕೊರೊನಾ ಮಹಾಮಾರಿಗೆ 775 ಬಲಿ
July 30, 2020, 4:32 AM

ನವದೆಹಲಿ(reporterkarnataka news):
ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 52, 123 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಕೊರೋನಾ ಪ್ರಕರಣ ಒಂದೇ ದಿನ 50000 ಕ್ಕೂ ಹೆಚ್ಚು ವರದಿಯಾಗಿದೆ. ಇದು ಆತಂಕ ಸೃಷ್ಟಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಇದೀಗ 16 ಲಕ್ಷದ ಹತ್ತಿರದಲ್ಲಿದೆ. ದೇಶದಲ್ಲಿ 15, 83, 792 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 5, 28, 242 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ ಮಾರಕ ಕೊರೊನಾದಿಂದ 775 ಮಂದಿಯ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾದಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 34, 968ಕ್ಕೆ ತಲುಪಿದೆ.