4:11 PM Thursday3 - December 2020
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ 

ಇತ್ತೀಚಿನ ಸುದ್ದಿ

ತುಳು ಅಕಾಡೆಮಿ ಸಿರಿ ಚಾವಡಿಯಲ್ಲಿ ಇಂದಿನಿಂದ 20 ರವರೆಗೆ ತುಳು ನಾಟಕ ಪರ್ಬ

October 14, 2020, 8:47 AM

ಮಂಗಳೂರು(reporterkarnataks): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇವರ ಸಹಕಾರದಿಂದ ಅಕ್ಟೋಬರ್ 14 ರಿಂದ 20 ವರೆಗೆ ಪ್ರತಿದಿನ ಸಂಜೆ 4.30 ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ತುಳು ನಾಟಕ ಪರ್ಬ ವನ್ನು ಆಯೋಜಿಸಲಾಗಿದೆ. 
ಅಕ್ಟೋಬರ್ 14 ರಂದು ಲೀಲಾವತಿ ಪೊಸಲಾಯಿ ಸಾರಥ್ಯ ಸಿಂಧೂರ ಕಲಾವಿದರು ಕಾರ್ಲ ಇವರ ‘ಪನೊಡಿತ್ತ್‍ಂಡ್ ಸಾರಿ’, ಅಕ್ಟೋಬರ್ 15 ರಂದು ರಮೇಶ್ ಎಮ್. ಸಂಗಮ ಕಲಾವಿದರು ಉಜಿರೆ ಇವರ ‘ತೂಯೆರೆ ಬರ್ಪೆರ್’, ಅಕ್ಟೋಬರ್ 16 ರಂದು ಶ್ರೀನಿವಾಸ್ ಕುಲಾಲ್ ಚಾರ್ಮಾಡಿ ಪಂಚಶ್ರೀ ಕಲಾವಿದರು ಚಾರ್ಮಾಡಿ ಇವರ ‘ಏತುಂಡ ಆತೆ’,   ಅಕ್ಟೋಬರ್  17 ರಂದು ಅನ್ನಪೂರ್ಣೇಶ್ವರಿ ಕಲಾತಂಡ ಇಂಚರ ಇವರ ‘ಮದಿಮಾಲ್’, ಅಕ್ಟೋಬರ್ 18 ರಂದು ಶರತ್ ಆಳ್ವ ಕೂರೇಲು ಬೊಳ್ಳು ಬೊಲ್ಪು ಕಲಾವಿದರು ಪುತ್ತೂರು ಇವರ ‘ಕಾಸ್‍ದ ಕಸರತ್ತ್’, ಅಕ್ಟೋಬರ್ 19 ರಂದು ಪುರಲ್ದಪ್ಪೆನ ಮೋಕೆದ ಕಲಾವಿದರು  ಪೊಳಲಿ ಇವರ ‘ಈ ಪನ್ಪನ ಯಾನ್ ಪನೊಡ’, ಅಕ್ಟೋಬರ್ 20 ರಂದು ಕಲಾ ಸವ್ಯಸಾಚಿ ಪ್ರಶಾಂತ್ ಸಿ ಕೆ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದರು ಇವರ  ‘ಸತ್ಯೊದ ಬಿರುವೆರ್’ ನಾಟಕ ಪ್ರದರ್ಶನ ನಡೆಯಲಿದೆ. 
ಕಾರ್ಯಕ್ರಮವು ನಮ್ಮ ಟಿ.ವಿ, ಫೇಸ್‍ಬುಕ್‍ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್. ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಇತ್ತೀಚಿನ ಸುದ್ದಿ

ಜಾಹೀರಾತು