5:23 AM Monday30 - November 2020
ಬ್ರೇಕಿಂಗ್ ನ್ಯೂಸ್
ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಇತ್ತೀಚಿನ ಸುದ್ದಿ

ತುಳುನಾಡಿನ ಪ್ರಕೃತಿ ಆರಾಧನೆಯಾದ ನಾಗರ ಪಂಚಮಿ ಹಬ್ಬಕ್ಕೂ ಬಂತು ಸಂಕಷ್ಟ 

July 25, 2020, 2:21 AM

  • ಅನುಷ್ ಪಂಡಿತ್

ಮಂಗಳೂರು(Reporterkaranatakanews):ಪ್ರಕೃತಿ ಆರಾಧನೆಯ ಭಾಗವಾದ, ಕೂಡು ಕುಟುಂಬದ ಸಂಕೇತವಾದ ತುಳುನಾಡಿನ ಭಯ ಭಕ್ತಿಯ ನಾಗರ ಪಂಚಮಿ ಹಬ್ಬಕ್ಕೆ ಶತಮಾನದ ಇತಿಹಾಸದಲ್ಲೇ ಮೊದಲ ಬಾರಿಗೆ ತಡೆ ಬಿದ್ದಿದೆ. ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ಕಣ್ಣಿನ ಕಾಣುವ ದೇವರು ಎಂದೇ ತುಳುವರು ಪರಿಗಣಿಸಿದ ಪಂಚಮಿ ಹಬ್ಬಕ್ಕೆ ಬಹು ದೊಡ್ಡ ಹೊಡೆತ ನೀಡಿದೆ.

ಕರಾವಳಿ ಭಾಗದಲ್ಲಿ ಮಳೆಗಾಲ ಆರಂಭವಾದ ಬಳಿಕ ಬರುವ ಮೊದಲ ದೊಡ್ಡ ಹಬ್ಬವೇ ನಾಗರ ಪಂಚಮಿ. ಇದಾದ ಬಳಿಕ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ,  ದಸರಾ, ದೀಪಾವಳಿ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಆ ಕಾರಣದಿಂದಲೇ ತುಳು ಸಂಸ್ಕೃತಿಯಲ್ಲಿ ನಾಗರ ಪಂಚಮಿಗೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ.

ಪ್ರಕೃತಿ ಅರಾಧನೆಯ ಭಾಗವಾಗಿ ನಾಗರ ಪಂಚಮಿಯನ್ನು ನಮ್ಮ ಪೂರ್ವಿಜರು ಆಚರಿಸಿಕೊಂಡು ಬಂದಿದ್ದಾರೆ. ನಾಗನ ಹೆಸರಿನಲ್ಲಿ ಒಂದಿಷ್ಟು ಪ್ರದೇಶದಲ್ಲಿ ವನವನ್ನು ಬೆಳೆಸಿ ಮರ ಗಿಡಗಳ ಅರಾಧನೆಗೂ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ನಾಗಬನದ ಕಾಂಕ್ರೀಟಿಕರಣ ಆಗುತ್ತಿದೆ. ಆರಾಧನೆಗಳು ಫ್ಯಾಶನ್ ಆಗಿ ಪರಿಗಣಿಸಲ್ಪಟ್ಟಿದೆ.

ನಾಗರ ಪಂಚಮಿ ಎಂದರೆ  ತುಳುನಾಡಿನ ಸಂಭ್ರಮ ಹಾಗೂ ನಂಬಿಕೆಯ ಹಬ್ಬ. ತುಳುನಾಡಿನ ಹಬ್ಬ ಗಳಲ್ಲಿ ಒಂದಾದ ಈ ಪಂಚಮಿಯು ಅನಾದಿಕಾಲ ದಿಂದ ಆಚರಣೆಗೆ ಬಂದಿದೆ. ನಾಗನ ಬನಕ್ಕೆ ಹಾಲು, ಸೀಯಾಳಭಿಷೇಕ  ಮಾಡಿದರೆ ಸಕಲ ಸಂಕಷ್ಟ, ದೋಷ ನಿವಾರಣೆಯಾಗುತ್ತದೆ ಎಂಬುದು ತುಳುವರ ಬಲವಾದ ನಂಬಿಕೆ. ಗೋತ್ತಿದ್ದೋ,  ಗೊತ್ತಿಲ್ಲದೆಯೋ ನಾಗನ ಸಂತತಿ ನಾಶ ಮಾಡಿದ್ದರೆ ಪರಿಹಾರ ದೊರಕುವುದು ಎಂಬ ನಂಬಿಕೆಯಿದೆ.

ಭೂಮಿ ಖರೀದಿಯ ವಿಷಯದಲ್ಲೂ ನಾಗನಿಗೆ ಮೊದಲ  ಪ್ರಾಶಸ್ತ್ಯ. ಮಕ್ಕಳಿಲ್ಲದವರಿಗೆ  ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಹಾಗಿರುವಾಗ ಪುರಾತನ ಕಾಲದಿಂದಲೂ ಬಂದಂಥ ಈ ಹಬ್ಬದ ವಿಧಿ ವಿಧಾನ ಈ ಬಾರಿ ಕೊರೊನಾ ದಿಂದಾಗಿ ಜನರ  ನಂಬಿಕೆಯ ಆಚರಣೆ  ಹಾಗೂ ಸಂತೋಷಕ್ಕೆ ಬ್ರೇಕ್ ಬಿದ್ದಿದೆ. 

ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಕಡೆ ಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು  ನಾಗನ  ಬಗ್ಗೆ ಅಪಾರ ಭಯ ಭಕ್ತಿ ಇಟ್ಟುಕೊಂಡಿದ್ದಾರೆ. ಭೂಮಿಯಲ್ಲಿ ನಾಗನ ವಾಸ ಸ್ಥಳ ಇಲ್ಲದ ಜಾಗವಿಲ್ಲ. ಹೀಗಿರುವಾಗ ಈ ಸಲ ಕುಟುಂಬದ ನಾಗ ಬನಕ್ಕೆ ಹಾಲೆರೆಯುವುದು , ಕುಟುಂಬ ದವರೆಲ್ಲ ಈ ನೆಪದಲ್ಲದರೂ  ವರ್ಷ ದಲ್ಲೊಂದು ದಿನ ಒಟ್ಟಿಗೆ ಸೇರುತ್ತಿದ್ದರು. ಸಂಬಂಧಗಳು ಸಂಕೀರ್ಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇದರ ಅನಿವಾರ್ಯತೆಯೂ ಇತ್ತು.

ಆದರೆ ಈ ಬಾರಿ ಕೊರೊನಾ ಸುನಾಮಿಗೆ ಎಲ್ಲವೂ ಕೊಚ್ಚಿ ಹೋಯಿತು.

ಇತ್ತೀಚಿನ ಸುದ್ದಿ

ಜಾಹೀರಾತು