ಇತ್ತೀಚಿನ ಸುದ್ದಿ
ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ: ನಾಪತ್ತೆಯಾದ ಅರ್ಚಕ ಕುಟುಂಬದ ಪತ್ತೆಗೆ ಬಿರುಸಿನ ಶೋಧ
August 7, 2020, 4:07 AM

ಮಡಿಕೇರಿ(reporterkarnataka news): ರಾಜ್ಯದಲ್ಲಿ ಕೊಡಗಿನ ಬೆಟ್ಟ ಕುಸಿತ ಆತಂಕ ಸೃಷ್ಟಿಸಿದೆ. ಇದೇ ವೇಳೆ ಕೊಡಗಿನ ತಲಕಾವೇರಿ ಸಮೀಪ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ನಾಪತ್ತೆಯಾಗಿರುವ ಐವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಆದರೆ ಇನ್ನೂ ಮಾಹಿತಿ ದೊರೆತಿಲ್ಲ.
ತಲಕಾವೇರಿ ದೇವಸ್ಥಾನದ ಅರ್ಚಕರಾದ ನಾರಾಯಣ ಆಚಾರ್, ಪತ್ನಿ ಶಾಂತ ಆಚಾರ್, ಅವರ ಸಹೋದರ ಆನಂದ ತೀರ್ಥ ಸ್ವಾಮಿ , ಸಹಾಯಕ ಅರ್ಚಕರಾದ ಪವನ್ ಮತ್ತು ರವಿ ಕಿರಣ್ ಬಗ್ಗೆ ಹುಡುಕಾಟ ನಡೆಸಲಾಗುತ್ತಿದೆ.
ಗುಡ್ಡದ ಮೇಲಿನಿಂದ ಮಣ್ಣು ಬಿದ್ದು ಸುಮಾರು ಐದು ಎಕರೆ ಭೂಮಿ ಪೂರ್ತಿ ಹಾನಿಯಾಗಿದೆ. ಗುರುವಾರ ರಾತ್ರಿ ತನಕ ಶೋಧ ನಡೆದಿತ್ತು,. ಇಂದು ಮುಂಜಾನೆ ರಾಷ್ಟ್ರೀಯ ವಿಪತ್ತು ನಿರ್ವಹಣಾಪಡೆಯ ಯೋಧರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ