ಇತ್ತೀಚಿನ ಸುದ್ದಿ
ಜಮ್ಮು -ಕಾಶ್ಮೀರದಲ್ಲಿ ಪಾಕಿಸ್ತಾನದ ರಹಸ್ಯ ಸುರಂಗ ಪತ್ತೆ: ಗಡಿ ಭದ್ರತಾ ಪಡೆಯಿಂದ ಬಹಿರಂಗ
August 29, 2020, 12:58 PM

ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ವಲಯದಲ್ಲಿ ಪಾಕಿಸ್ತಾನ ರಹಸ್ಯವಾಗಿ ನಿರ್ಮಿಸಿದ್ದ ಸುರಂಗವನ್ನು ಗಡಿ ಭದ್ರತಾಪಡೆ ಪತ್ತೆ ಹಚ್ಚಿದೆ. ಪಾಕಿಸ್ತಾನದಲ್ಲಿ ಸುರಂಗ ಮಾರ್ಗ ಆರಂಭವಾಗುತ್ತಿದ್ದು, ಭಾರತದ ಸಾಂಬಾದಲ್ಲಿ ಕೊನೆಗೊಳ್ಳುತ್ತಿದೆ. ಪಾಕಿಸ್ತಾನ ಸೇನಾಪಡೆಯ ಸಹಕಾರದಿಂದ ಈ ರಹಸ್ಯ ಸುರಂಗ ಮಾರ್ಗ ನಿರ್ಮಿಸಲಾಗಿದೆ ಎಂಬ ಸಂಶಯ ತಲೆದೋರಿದೆ.
ಸುರಂಗದ ಅಂತ್ಯದ ಭಾಗವನ್ನು ಮರಳಿನ ಚೀಲ ತುಂಬಿಸಿ ಭರ್ತಿ ಮಾಡಲಾಗಿದೆ. ಇದರಲ್ಲಿ ಪಾಕಿಸ್ತಾನದ ಚಿಹ್ನೆಗಳು ದೊರೆತಿದೆ. ಉಗ್ರರನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನ ಈ ಸುರಂಗ ಮಾರ್ಗದ ಸಂಚು ಹೆಣೆದಿದೆ.