ಇತ್ತೀಚಿನ ಸುದ್ದಿ
ಚಿನ್ನ ಕಳ್ಳ ಸಾಗಾಟ: ಕಸ್ಟಂಮ್ಸ್ ಅಧಿಕಾರಿಗಳಿಂದ ಇಂದು ಸ್ವಪ್ನಾ ಸುರೇಶ್ ವಿಚಾರಣೆ
July 23, 2020, 6:13 AM

ತಿರುವನಂತಪುರ(reporterkarnatakanews): ಕೇರಳದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆ ಸೃಷ್ಟಿಸಿರುವ ಚಿನ್ನಕಳ್ಳ ಸಾಗಾಟ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಕಸ್ಟಂಮ್ಸ್ ಅಧಿಕಾರಿಗಳು ಇಂದು ವಿಚಾರಣೆಗೆ ಗುರಿಪಡಿಸಲಿದ್ದಾರೆ.
ಇದುವರೆಗೆ ರಾಷ್ಟ್ರೀಯ ತನಿಖಾ ದಳ ಸ್ವಪ್ನಾ ಸುರೇಶ್ ಅವರ ವಿಚಾರಣೆ ನಡೆಸುತ್ತಿತ್ತು.
ಸ್ವಪ್ನಾ ಅವರ ವಿಚಾರಣೆಗೆ ಅನುಮತಿ ನೀಡಬೇಕೇಂಬ ಕಸ್ಟಂಮ್ಸ್ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಚಿನ್ನ ಕಳ್ಳ ಸಾಗಾಟದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಕಸ್ಟ್ಂಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಮಧ್ಯೆ ಈ ಕುರಿತು ತನಿಖೆ ನಡೆಸುತ್ತಿರುವ 8 ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಇದು ತನಿಖೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.