ಇತ್ತೀಚಿನ ಸುದ್ದಿ
ಚಾಕಲೇಟ್ ಆಮಿಷವೊಡ್ಡಿ 5ರ ಹರೆಯದ ಬಾಲಕಿ ಮೇಲೆ ವೃದ್ಧ ನಿರಂತರ ಅತ್ಯಾಚಾರ
July 28, 2020, 5:35 PM

ಸುಳ್ಯ(reporterkarnataka news):
ಐವತ್ತರ ಹರೆಯದ ವ್ಯಕ್ತಿಯೊಬ್ಬ ತನ್ನ ಮೊಮ್ಮಗಳ ಪ್ರಾಯದ ಐದರ ಹರೆಯದ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬೆಳ್ಳಾರೆ ಸಮೀಪ ನಡೆದಿದೆ.
ಬಾಲಕಿಗೆ ಚಾಕಲೇಟಿನ ಆಮಿಷೆಯೊಡ್ಡಿ ವೃದ್ದ ಈ ದುಷ್ಕೃತ್ಯವನ್ನು ಕಳೆದ ನಾಲ್ಕು ತಿಂಗಳಿನಿಂದ ನಡೆಸಿಕೊಂಡು ಬರುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕಿ ಈ ವಿಷಯವನ್ನು ಕೊನೆಗೂ ತನ್ನ ಹೆತ್ತವರಲ್ಲಿ ಹೇಳಿಕೊಂಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಸಿ ಮೇಲೇ ಪೋಕ್ಸಾ ಕಾಯಿದೆ ಹಾಕಲಾಗಿದೆ.